ಬೆಂಗಳೂರು: ನಗರದಲ್ಲಿ ಆಟೋ ಪ್ರಯಾಣ ದರ ಹೆಚ್ಚಳವಾಗಿದ್ದು, ಆಟೋ ಪ್ರಯಾಣಿಕರಿಗೆ ಶಾಕ್ ಎದುರಾಗಿದೆ. ಕನಿಷ್ಠ ದರ 25 ರೂಪಾಯಿಂದ 30 ರೂ.ಗೆ ಏರಿಕೆಯಾಗಿದೆ. ನಂತರ ಪ್ರತಿ ಕಿಲೋಮೀಟರ್ಗೆ 15 ರೂ.ಗೆ ಹೆಚ್ಚಳವಾಗಿದೆ. ಈ ಮೊದಲು ಪ್ರತಿ ಕಿಲೋಮೀಟರ್ಗೆ 13 ರುಪಾಯಿ ಇದ್ದು. ಅದನ್ನು 15 ರುಪಾಯಿ ಏರಿಕೆ ಮಾಡಲಾಗಿದೆ. ಡಿಸೆಂಬರ್ 1 ರಿಂದ ಹೊಸ ದರ ಅನ್ವಯವಾಗುತ್ತದೆ.
20 ಕೆಜಿ ಮೇಲ್ಪಟ್ಟ ಲಗೇಜ್‌ಗೆ 5 ರೂಪಾಯಿ ಬಾಡಿಗೆ ಹಣ ನಿಗದಿಪಡಿಸಲಾಗಿದ್ದು, 50 ಕೆಜಿವರೆಗೆ ಮಾತ್ರ ಆಟೋದಲ್ಲಿ ಲಗೇಜ್ ಸಾಗಿಸಲು ಅವಕಾಶವಿರುತ್ತದೆ.
ಪರಿಷ್ಕೃತ ದರ ಹಚ್ಚಳದ ಕುರಿತು ಮೀಟರ್ನಲ್ಲಿ ಪ್ರದರ್ಶಿಸಬೇಕು. ಆಟೋ ಮೀಟರ್ಗಳನ್ನ ದರಪರಿಷ್ಕರಣೆಗೆ 90 ದಿನ ಅವಕಾಶ ಇರುತ್ತದೆ. ಅಷ್ಟೊರೊಳಗೆ ಮೀಟರ್ ಬದಲಾವಣೆ ಮಾಡಬೇಕು.
Laxmi News 24×7