ರಾಜ್ಯದ ಗೃಹಸಚಿವರೊಬ್ಬರು ಮ್ಯಾಡ್ ಮ್ಯಾನ್ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಅನಾವಶ್ಯಕವಾಗಿ ಕಾಂಗ್ರೆಸ್ ನಾಯಕರ ಹೆಸರನ್ನು ಮಧ್ಯ ತರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೃಹಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕಿಡಿ ಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಮಗನ ಹೆಸರು ಕೇಳಿಬಂದಿದೆ ಎಂದು ಹೇಳಿಕೆ ನೀಡಿದ್ದರು. ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಗೃಹಸಚಿವರೊಬ್ಬರು ಮ್ಯಾಡ್ ಮ್ಯಾನ್. ಇಗಾಗಲೇ ಪ್ರಕರಣ ಕುರಿತಂತೆ ಇಡಿ ಇಲಾಖೆಗೆ ಸರಕಾರ ಬರೆದಿರುವ ಪತ್ರದ ಮಾಹಿತಿ ನೀಡುವಂತೆ ಕೇಳಿದ್ದೇವೆ. ಗೃಹ ಸಚಿವರು ಈ ಕೂಡಲೇ ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ನಾಯಕರ ಮಗ ಯಾರೆಂದು ಹೇಳಲಿ ಎಂದರು. ಇನ್ನು ಬಿಜೆಪಿಗೆ ಕಾಂಗ್ರೆಸ್‍ನತ್ತ ಬೆರಳು ತೋರಿಸಿ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ. ನಿಜವಾಗಿಯೂ ಧೈರ್ಯ ಇದ್ದರೆ ಗೃಹಸಚಿವರು ಈ ಕುರಿತಂತೆ ಮಾಹಿತಿಯನ್ನು ಬಹಿರಂಗ ಮಾಡಲಿ ಎಂದು ಸವಾಲು ಹಾಕಿದರು.