ಕಳೆದ ಎರಡು ತಿಂಗಳ ಹಿಂದಷ್ಟೆ ಪೂಗಾನಹಳ್ಳಿ ಗ್ರಾಮದ 21 ವರ್ಷದ ಯುವಕ ಅಭಷೇಕ್ ಎನ್ನುವನಿಗೆ ನಾರಾಯಣಸ್ವಾಮಿ ಬುದ್ದಿವಾದ ಹೇಳಿದ್ದರು. ಈ ವಿಚಾರ ಮನೆಯವರಿಗೂ ತಿಳಿದಿದ್ದು ಅವನೇ ಕೊಲೆಗಾರ ಎಂತಲೂ ಅನುಮಾನಿಸಲಾಗಿತ್ತು.
ನಾರಾಯಣಸ್ವಾಮಿ ಅವರು ಮೂಲತಃ ರೈತ, ತನಗಿರೊ 10 ಎಕರೆ ಜಮೀನನಲ್ಲಿ ತರಕಾರಿ ಬೆಳೆ, ದನ ಕರುಗಳಿಗೆ ಬೇಕಿರುವ ಮೇವಿನ ಹುಲ್ಲು ಬೆಳೆಸುವುದು, ದಿನನಿತ್ಯ ದನ ಕರುಗಳ ಆರೈಕೆ ಮಾಡುವುದು, ಹಾಲು ಮಾರಾಟ ಮಾಡುವುದನ್ನೆ ತಮ್ಮ ಕಾಯಕ ಮಾಡಿಕೊಂಡಿದ್ದರು,
: Bengaluru Crime: ಇಬ್ಬರು ಮಕ್ಕಳ ತಾಯಿಗೆ ಬಾಯ್ಫ್ರೆಂಡ್ ಮೋಹ; ಕಾಟ ತಾಳಲಾರದೆ ಕೊಂದೇ ಬಿಟ್ಟ ಪ್ರಿಯಕರ!
ಇನ್ನು ಇವರ ತಂದೆ, ತಾತರ ಕಾಲದಿಂದಲೂ ಇವ್ರದ್ದು ಪಟೇಲರ ವಂಶ. ಪೂಗಾನಹಳ್ಳಿ ಗ್ರಾಮದಲ್ಲಿ ನ್ಯಾಯ ಪಂಚಾಯ್ತಿಯನ್ನು ತಂದೆ ಹಾಗೂ ತಾತ ಮಾಡಿಕೊಂಡು ಬಂದಿದ್ದರು. ಅದನ್ನೇ ಮೃತ ನಾರಾಯಣಸ್ವಾಮಿ ಸಹ ಮಾಡಿಕೊಂಡು ಬಂದಿದ್ದು, ಕಳೆದ ಕೆಲ ವರ್ಷಗಳಿಂದ ನ್ಯಾಯ ಪಂಚಾಯ್ತಿ ಮಾಡೋದನ್ನೆ ಬಿಟ್ಟಿದ್ದಾರೆ, ಹೀಗಾಗಿ ತಾನಾಯಿತು ತನ್ನ ಕೆಲಸವಾಯಿತು, ಯಾರಾದರು ಸಮಸ್ಯೆ ಎಂದು ಬಂದಲ್ಲಿ ರಾಜಿ ಪಂಚಾಯ್ತಿಯನ್ನು ಆಗಾಗ್ಗೆ ಜನರ ಕೋರಿಕೆಯ ಮೇರೆಗೆ ಮಾಡುತ್ತಿದ್ದರು.
ಕಾಲುವೆಯಲ್ಲಿ ನಾರಾಯಣಸ್ವಾಮಿ ಶವ ಪತ್ತೆ
ಸಮಾಜಮುಖಿ ವ್ಯಕ್ತಿತ್ವ ಹೊಂದಿರುವ ನಾರಾಯಣಸ್ವಾಮಿ ಭೀಕರವಾಗಿ ಕೊಲೆಯಾಗಿದ್ದ ಸ್ತಿತಿಯಲ್ಲಿ ಶವ ಪತ್ತೆಯಾಗಿದ್ದು ಅವರ ಜಮೀನು ಬಳಿಯೇ. ಗ್ರಾಮದ ಒಂದು ಕಿಲೋ ಮೀಟರ್ ದೂರವಿರುವ ತಮ್ಮ ತರಕಾರಿ ತೋಟದ ಎದುರಿನ ಕಾಲುವೆಯಲ್ಲಿ ನಾರಾಯಣಸ್ವಾಮಿ ಅವರ ಶವ ಪತ್ತೆಯಾಗಿತ್ತು,
ನವೆಂಬರ್ 2 ರಂದು ಬೆಳಗ್ಗೆ ತಿಂಡಿ ಮುಗಿಸಿಕೊಂಡು ದನ ಕರುಗಳಿಗೆ ಮೇವು ತರೋದಾಗಿ ಹೇಳಿ ಹೋಗಿದ್ದ ನಾರಾಯಣಸ್ವಾಮಿ ಮಧ್ಯಾಹ್ನ ಎರಡೂವರೆ ಆದರು ಮನೆಗೆ ವಾಪಾಸ್ ಬಂದಿರ್ಲಿಲ್ಲ, ಹೀಗಾಗಿ ಪತ್ನಿ ಸುಜಾತಮ್ಮ ಹಾಗೂ ಚಿಕ್ಕ ಮಗನಾದ ಗಿರೀಶ್ ತೋಟದ ಕಡೆ ಹೋಗಿ ನೊಡಿದಾಗ ರಕ್ತದ ಮಡುವಿನಲ್ಲಿ ನಾರಾಯಣಸ್ವಾಮಿ ದೇಹ ಹಾಗೂ ತಲೆ ಬೇರೆ ಬೇರೆಯಾಗಿ ಬಿದ್ದಿತ್ತು,
: Bengaluru; ಬಾಡಿಗೆ ಹಣದಿಂದ ಒಡವೆ ಖರೀದಿಸಿದ್ದಕ್ಕೆ ಪತ್ನಿಯನ್ನ ಕೊಂದೇ ಬಿಟ್ಟ!
ಕೂಡಲೇ ಕೆಜಿಎಫ್ ನ ಬೇತಮಂಗಲ ಪೊಲೀಸರಿಗೆ ಎನ್‍ಜಿ ಹುಲ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ್ಯ ಸುನೀಲ್ ಕರೆ ಮಾಡಿ ಮಾಹಿತಿ ನೀಡಿದಾಗ ಸ್ಥಳಕ್ಕೆ ಭೇಟಿ ನೀಡಿದ ಬೇತಮಂಗಲ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮೃತ ದೇಹವನ್ನ ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ರವಾನಿಸಿ, ಮರೋಣತ್ತರ ಪರೀಕ್ಷೆ ನಡೆಸಿ, ಆ ಬಳಿಕ ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದರು.
13 ಗಂಟೆಯಲ್ಲಿಯೇ ಆರೋಪಿಯ ಬಂಧನ
ಕೊಲೆ ನಡೆದ ನಂತರ ಅಭಿಷೇಕ್ ಗ್ರಾಮದಿಂದ ಕಾಣೆಯಾಗಿದ್ದ, ಕೂಡಲೇ ಎಚ್ಚೆತ್ತುಕೊಂಡ ಬೇತಮಂಗಲ ಪೊಲೀಸರು ಕೇವಲ 13 ಗಂಟೆಗಳಲ್ಲಿಯೇ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಮೇಡಿಹಾಳ ಬಳಿ ಆರೋಪಿ ಅಭೀಷೇಕ್‍ನನ್ನ ಬಂಧಿಸಿ, ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ. ಪೊಲೀಸರ ತನಿಖೆಯಲ್ಲಿ ತಪ್ಪೊಪ್ಪಿಕೊಂಡಿರುವ ಕೊಲೆಗಾರ ಅಭಿಷೇಕ್, ಹೌದು ನಾನೇ ಕೊಲೆ ಮಾಡಿದ್ದು ಎಂತಲೂ ನಿರ್ಭೀತಿಯಿಂದ ಹೇಳಿದ್ದಾನಂತೆ.
ಪ್ರೀತಿಸಿದ ಮಹಿಳೆ ಆತ್ಮಹತ್ಯೆ
ಆರೋಪಿ ಅಭಿಶೇಕ್ ಬೇತಮಂಗಲದ ಗುಟ್ಟಹಳ್ಳಿ ಡಿಗ್ರಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದಾನೆ. ಇವನಿಗೆ ಒಂದು ಅಕ್ರಮ ಸಂಬಂಧ ಕೂಡಾ ಇತ್ತಂತೆ. ಪೂಗಾನಹಳ್ಳಿ ಗ್ರಾಮದಲ್ಲಿಯೇ ವಿವಾಹಿತ ಮಹಿಳೆಯೊಬ್ಬರ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಅಭಿಷೇಕ್ ಆಕೆಯನ್ನ ಪ್ರೀತಿಸುತ್ತಿದ್ದನು. ಆದರೆ ಆ ಮಹಿಳೆ ಕೌಟುಂಬಿಕ ಕಲಹದಿಂದ ಕಳೆದ ಅಕ್ಟೋಬರ್ ತಿಂಗಳಲ್ಲಿ ಕ್ರಿಮಿನಾಶಕ ಸೇವಿಸಿ ಮನೆಯಲ್ಲೆ ಆತ್ಮಹತ್ಯೆ ಮಾಡಿಕೊಂಡಿದ್ದರು.
ಪಾಗಲ್ ಪ್ರೇಮಿಯಾಗಿದ್ದ ಅಭಿಷೇಕ್
ಇದಾದ ನಂತರ ಗ್ರಾಮದಲ್ಲಿ ಅಭಿಷೇಕ್ ವರ್ತನೆಯೂ ಸರಿ ಇರ್ಲಿಲ್ಲವಂತೆ. ತಾನು ಪ್ರೀತಿ ಮಾಡುತ್ತಿದ್ದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ, ಅಭಿಷೇಕ್ ಪಾಗಲ್ ಪ್ರೇಮಿಯಂತೆ ವರ್ತನೆ ಮಾಡುತ್ತಿದ್ದನು. ವಾಟ್ಸಾಪ್ ಸ್ಟೇಟಸ್ ನನ್ನು ಪೀಲಿಂಗ್ ಸಾಂಗ್ಸ್ ಹಾಕುವುದು ಹಾಗೂ ಕೆಲವರಿಗೆ ಎಚ್ಚರಿಕೆ ನೀಡುವಂತೆ ಮತ್ತು ಅವರ ಕೆಲಸ ಅವರು ಮಾಡಿಕೊಳ್ಳಬೇಕು ಎನ್ನುವ ಸ್ಟೇಟಸ್ ಹಾಕುತ್ತಿದ್ದನು.
ವಿವಾಹಿತ ಮಹಿಳೆಯೊಂದಿಗೆ ಅಭಿಷೇಕ್ ಹೊಂದಿರುವ ಅಕ್ರಮ ಸಂಬಂದದ ಬಗ್ಗೆ ನಾರಾಯಣಸ್ವಾಮಿ ಅವರಿಗೆ ತಿಳಿದುಬಂದಿದೆ. ಈ ವಿಚಾರವನ್ನ ಮಹಿಳೆಯ ಪತಿಗೆ ತಿಳಿಸಿದ್ದಾರೆ, ಜೊತೆಗೆ ಅಭಿಷೇಕ್‍ಗೂ ಬುದ್ಧಿವಾದ ಹೇಳಿದ್ದಾರೆ, ನೋಡಪ್ಪಾ ನೀನಿನ್ನು ಚಿಕ್ಕ ಹುಡುಗ ಇದೆಲ್ಲಾ ಬಿಟ್ಟು ಒಳ್ಳೇ ಜೀವನ ಮಾಡು ಎಂದು ಎರಡು ತಿಂಗಳ ಹಿಂದೆ ಬುದ್ಧಿವಾದ ಹೇಳಿದ್ದರು.
ಅಭಿಷೇಕ್ ಗೆ ಎಚ್ಚರಿಕೆ ನೀಡಿದ್ದೇ ತಪ್ಪಾಯ್ತು!
ಆದರೆ ಮಹಿಳೆ ಸಾವಿನ ನಂತರವೂ ಮತ್ತೊಮ್ಮೆ ಬುದ್ದಿವಾದ ಹೇಳಿದ್ದ ಮೃತ ನಾರಾಯಣಸ್ವಾಮಿ ನಿನ್ನಿಂದ ಒಂದು ಅಮಾಯಕ ಹೆಣ್ಣಿನ ಜೀವವೇ ಹೊಗಿದೆ, ಇನ್ನಾದರು ನೆಟ್ಟಗೆ ಬದುಕು ಎಂಬ ಎಚ್ಚರಿಕೆ ನೀಡಿದ್ದರು.
ಬುದ್ದಿಮಾತನ್ನ ಸ್ವೀಕರಿಸದ ಕೊಲೆಗಾರ ಅಭಿಷೇಕ್, ತನ್ನ ಅಕ್ರಮ ಸಂಬಂಧದ ಮಾಹಿತಿ ಗ್ರಾಮಸ್ಥರಿಗೆ ತಿಳಿದುಬಿಡುತ್ತೆ ಎನ್ನುವ ಆತಂಕ ಇನ್ನಿಲ್ಲದಂತೆ ಕಾಡಿದೆ. ಇದೇ ದ್ವೇಷದಿಂದಲೇ ನಾರಾಯಣಸ್ವಾಮಿ ಅವರನ್ನ ಕೊಲ್ಲಲು ಹೊಂಚು ಹಾಕಿ ಕುಳಿತಿದ್ದನು.
ನವೆಂಬರ್ 2 ರಂದು ಮಧ್ಯಾಹ್ನ ನಾರಾಯಣಸ್ವಾಮಿ ಅವರನ್ನ ಹಿಂಬಾಲಿಸಿ ಬಂದಿದ್ದಾನೆ. ಹುಲ್ಲು ತರಲು ತೋಟಕ್ಕೆ ಬೈಕ್‍ನಲ್ಲಿ ಹೊಗಿದ್ದ ನಾರಾಯಣಸ್ವಾಮಿ, ತೋಟಗಳ ಮಧ್ಯೆ ಕಾಲುವೆ ಇದ್ದ ಕಾರಣ ತಮ್ಮ ಬೈಕ್ ನ್ನ ಕಾಲುವೆ ಎದುರೇ ನಿಲ್ಲಿಸಿದ್ದರು.
ಮಚ್ಚಿನಿಂದ ಕೊಲೆಗೈದು ಪರಾರಿ
ಹುಲ್ಲು ಕಟಾವು ಮಾಡಿ, ಇನ್ನೇನು ಕಾಲುವೆ ದಾಟಿ ಬೈಕ್‍ನಲ್ಲಿ ಹುಲ್ಲು ಇಡಲು ಬರುತ್ತಿದ್ದಂತೆ, ಕಾಲುವೆ ಮುಂದಿನ ಪೊದೆಯಲ್ಲಿ ಅಡಗಿದ್ದ ಅಭಿಷೇಕ್ ಮುಂಭಾಗದಿಂದಲೇ ಬಂದು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ, ಮಚ್ಚಿನ ಏಟಿಗೆ ತಲೆ ಹಾಗೂ ದೇಹ ಬೇರ್ಪಟ್ಟಿದ್ದು ಸ್ಥಳದಲ್ಲಿಯೇ ನಾರಾಯಣಸ್ವಾಮಿ ಮೃತ ಪಟ್ಟಿದ್ದಾರೆ.
ನಾರಾಯಣಸ್ವಾಮಿ ಕೊಲೆಯಿಂದ ರೊಚ್ಚಿಗೆದ್ದಿದ್ದ ಸಂಬಂಧಿಕರು ಆರೋಪಿ ಅಭಿಷೇಕ್ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಮನೆ ಮುಂದೆ ನಿಲ್ಲಿಸಿದ್ದ, ಅಪೆ ಆಟೋವನ್ನ ಧ್ವಂಸ ಮಾಡಿ, ಟ್ರಾಕ್ಟರ್ ಹಾಗೂ ಮನೆ ಮೇಲೂ ಕಲ್ಲುಗಳನ್ನ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು, ಆರೋಪಿಗೆ ಜೀವಾವಧಿ ಶಿಕ್ಷೆ ನೀಡುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.