Breaking News

64 ಪ್ರಯಾಣಿಕರನ್ನು ಊಟಕ್ಕೆಂದು ಕೆಳಗಿಳಿಸಿ ಬಹುದೊಡ್ಡ ಶಾಕ್​ ಕೊಟ್ಟ ಕೇರಳ ಖಾಸಗಿ ಬಸ್​ ಡ್ರೈವರ್​;

Spread the love

ಕೇರಳದಿಂದ ಅಸ್ಸಾಂಗೆ ಹೊರಟಿದ್ದ ಖಾಸಗಿ ಬಸ್​​ನ ಚಾಲಕ ಮತ್ತು ಕ್ಲೀನರ್​ ಸೇರಿ ಪ್ರಯಾಣಿಕರಿಗೆ ಬಹುದೊಡ್ಡ ಶಾಕ್​ ಕೊಟ್ಟಿದ್ದಾರೆ.

ಬಹುಶ್ಯಃ ಆ ಪ್ರಯಾಣಿಕರು ಯಾರೂ ಹೀಗೊಂದು ಕೆಟ್ಟ ಸನ್ನಿವೇಶ ಎದುರಾಗಬಹುದು ಎಂದು ನಿರೀಕ್ಷೆ ಮಾಡಿರಲು ಸಾಧ್ಯವೇ ಇಲ್ಲ. ಇದೊಂದು ಕೇರಳ ಮೂಲದ ಖಾಸಗಿ ಬಸ್​ ಆಗಿದ್ದು, 64 ಪ್ರಯಾಣಿಕರನ್ನು ಹೊತ್ತು ಅಸ್ಸಾಂಗೆ ಸಾಗುತ್ತಿತ್ತು. ಹೀಗೆ ಹೋಗುವಾಗ ತೆಲಂಗಾಣದ ನಲ್ಗೊಂಡ ಬಳಿ ಊಟಕ್ಕೆ ಇಳಿದಿದ್ದರು. ಸಹಜವಾಗಿ ಪ್ರಯಾಣಿಕರೆಲ್ಲ ತಮ್ಮ ಲಗೇಜ್​ಗಳನ್ನೆಲ್ಲ ಬಸ್​​ನಲ್ಲೇ ಇಟ್ಟು ಊಟಕ್ಕೆಂದು ಬಸ್​ ಇಳಿದಿದ್ದರು. ಆದರೆ ಅವರೆಲ್ಲ ಇತ್ತ ಊಟ ಮಾಡುತ್ತಿದ್ದರೆ, ಅತ್ತ ಚಾಲಕ ಎಲ್ಲ ಪ್ರಯಾಣಿಕರ ಲಗೇಜ್​, ಬ್ಯಾಗ್​​ಗಳನ್ನೆಲ್ಲ ಕಳವು ಮಾಡಿದ್ದಾನೆ. ಅಂದರೆ ಬಸ್​​ನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಈ ಬ್ಯಾಗ್​​ಗಳಲ್ಲಿ ಪ್ರಯಾಣಿಕರ ಬಟ್ಟೆ, ಹಣ, ಮತ್ತಿತರ ಬೆಲೆಬಾಳುವ ವಸ್ತುಗಳೂ ಇದ್ದವು.

ಇನ್ನು ನಲ್ಗೊಂಡ ಬಳಿಯ ನರ್ಕತ್​ಪಲ್ಲಿ ಬಳಿ ಬರುತ್ತಿದ್ದಂತೆ ಚಾಲಕ ಮತ್ತು ಕ್ಲೀನರ್​ ಇಬ್ಬರೂ ಸೇರಿ ಪ್ರಯಾಣಿಕರ ಬಳಿ, ನೀವೆಲ್ಲ ಇಲ್ಲೇ ಇಳಿದು ಊಟ ಮಾಡುತ್ತಿರಿ. ಬಸ್​ ಯಾಕೋ ಸ್ವಲ್ಪ ಸಮಸ್ಯೆ ಕೊಡುತ್ತಿದೆ. ಇಲ್ಲೇ ಸಮೀಪ ಹೋಗಿ ರಿಪೇರಿ ಮಾಡಿಸಿಕೊಂಡು ಬರುತ್ತೇವೆ ಎಂದಿದ್ದಾರೆ. ಅದನ್ನು ನಂಬಿದ ಜನರು ಕೆಳಗೆ ಇಳಿದು ಹೋಗಿದ್ದರು. ಆದರೆ ಅವರೆಲ್ಲ ಊಟ ಮಾಡಿ ಬಂದು ಕಾದಿದ್ದೇ ಬಂತು. ಆದರೆ ಬಸ್​ ಮಾತ್ರ ವಾಪಸ್​ ಬರಲಿಲ್ಲ.

ಶುಕ್ರವಾರ ರಾತ್ರಿಯೇ ಘಟನೆ ನಡೆದಿದೆ. ಒಟ್ಟು 64 ಪ್ರಯಾಣಿಕರಲ್ಲಿ 59 ಮಂದಿ ಅಸ್ಸಾಂಗೆ ಹೋಗುವವರು ಆಗಿದ್ದರೆ, 5 ಮಂದಿ ಬಿಹಾರಕ್ಕೆ ಪ್ರಯಾಣ ಮಾಡುವವರಿದ್ದರು. ಭಾನುವಾರದ ಹೊತ್ತಿಗೆ ಅಸ್ಸಾಂ ತಲುಪಬೇಕಿತ್ತು. ನರ್ಕತ್​ಪಲ್ಲಿ ಖಾಸಗಿ ಹೋಟೆಲ್​ವೊಂದರ ಬಳಿ ಡ್ರೈವರ್ ಬಸ್​ ನಿಲ್ಲಿಸಿ ಹೋಗಿದ್ದ. ತುಂಬ ಹೊತ್ತು ಕಾದ ಪ್ರಯಾಣಿಕರು 100ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರೇ ಪ್ರಯಾಣಿಕರಿಗೆ ರಾತ್ರಿ ಊಟ ನೀಡಿದ್ದಾರೆ. ಹಾಗೇ, ಸ್ಥಳೀಯವಾಗಿ ವಾಸವಾಗಿರಲೂ ಅನುವು ಮಾಡಿಕೊಟ್ಟಿದ್ದಾರೆ. ಇನ್ನು ಬಸ್​ನವರು ಪ್ರಯಾಣಿಕರಿಗೆ ನೀಡಿರುವ ಫೋನ್​ ನಂಬರ್​ ಆಧರಿಸಿ ಪೊಲೀಸರು ತನಿಖೆಯನ್ನೂ ಶುರು ಮಾಡಿದ್ದಾರೆ. ತಮ್ಮ ಹಣ, ಬಟ್ಟೆ ಸಿಕ್ಕರೆ ಸಾಕು ಎನ್ನುತ್ತಿದ್ದಾರೆ ಪ್ರಯಾಣಿಕರು.


Spread the love

About Laxminews 24x7

Check Also

ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಜೆ.ಎಂ.ಕಾಲೆಮಿರ್ಚಿ ಪುಂಡ ಎಂಇಎಸ್ ಮುಖಂಡನ ಜೊತೆಗೆ ಸೆಲ್ಪಿ

Spread the loveಕರ್ನಾಟಕ‌ ರಾಜ್ಯೋತ್ಸವದಲ್ಲಿ ಕರಾಳ ದಿನಾಚರಣೆ ಮಾಡಲು ಎಂಇಎಸ್ ಗೆ ಅನುಮತಿ ಕೊಡುವುದಿಲ್ಲ ಎಂದು ರಾತ್ರೋರಾತ್ರಿ ಈ‌ ಮೊದಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ