ಪತ್ನಿ ಬಾಡಿಗೆ ನೀಡಲು ಎತ್ತಿಟ್ಟಿದ್ದ ಹಣ ಖರ್ಚು ಮಾಡಿದ್ದಾಳೆಂದು ಪತಿರಾಯ ತನ್ನ ಪತ್ನಿಯನ್ನೇ ಕೊಲೆಮಾಡಿದ್ದಾನೆ. ಘಟನೆ ಬೆಂಗಳೂರಿನ ದಯಾನಂದ ನಗರದಲ್ಲಿ ನಡೆದಿದೆ. ಪತಿ ಫಾರೂಕ್ ಆಗಿದ್ದು, ಪತ್ನಿ ನಾಜೀಯ ಕೊಲೆಯಾಗಿರುವ ದುರ್ದೈವಿಯಾಗಿದ್ದಾರೆ. ಪತ್ನಿ 6500ರೂ ಹಣದಲ್ಲಿ ಡ್ಯೂಪ್ಲಿಕೇಟ್ ಜ್ಯುವೆಲರಿ ಖರೀದಿಸಿದ್ದು, ಬಾಡಿಗೆಗೆ ಎಂದು ನೀಡಿದ್ದ ಹಣ ಖರ್ಚು ಮಾಡಿಕೊಂಡಿದ್ದಾಳೆ.
ಬಳಿಕ ಬಾಡಿಗೆ ಹಣ ನೀಡುವಂತೆ ಪತಿ ತಿಳಿಸಿದಾಗ ವಿಚಾರ ಬಯಲಾಗಿದೆ. ನಂತರ ಕೋಪಗೊಂಡ ಫಾರೂಕ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ, ನಂತರ ಪ್ರಜ್ಞಾಹೀನಳಾದ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ನಾಜೀಯಾ ಸಾವನ್ನಪ್ಪಿದ್ದಾಳೆ. ಮೃತಳ ಪೋಷಕರು ನೀಡಿದ ದೂರು ಮೇರೆಗೆ ಪತಿ ಫಾರೂಕ್ ನನ್ನು ಪೊಲೀಸರು ಬಂಧಿಸಿದ್ದಾರೆ ಈ ಸಂಬಂಧ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.