Breaking News

ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಮರಾಠಿ ಪ್ರೇಮಕ್ಕೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.

Spread the love

ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಮರಾಠಿ ಪ್ರೇಮಕ್ಕೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.

ಬೆಳಗಾವಿಯ ಬಹುತೇಕ ರಾಜಕಾರಣಿಗಳು ಮರಾಠಿ ಭಾಷೆಯಲ್ಲಿ ಭಾಷಣ,ಪ್ರಚಾರಪತ್ರ, ಶುಭಾಶಯ ಪತ್ರ ಎಲ್ಲವನ್ನೂ ಮಾಡಿದರೂ ಅವರೆಲ್ಲ ಕನ್ನಡಕ್ಕೆ ಮೊದಲ ಆದ್ಯತೆ ನೀಡಿ ನಂತರದ ಸ್ಥಾನವನ್ನು ಮರಾಠಿಗೆ ನೀಡುತ್ತಾರೆ.

ಆದರೆ ಅನಿಲ ಬೆನಕೆ ಅವರದ್ದು ಮಾತ್ರ ಮರಾಠಿಗೆ ಮೊದಲ ಆದ್ಯತೆ. ಕನ್ನಡಕ್ಕೆ ನಂತರದ ಸ್ಥಾನ, ಕೇವಲ ಕಾಟಾಚಾರಕ್ಕೆನ್ನುವಂತೆ.

ದೀಪಾವಳಿ ಶುಭಾಶಯ ಪತ್ರದಲ್ಲೂ ಹಾಗೇ ಮಾಡಿದ್ದಾರೆ. ಮೇಲ್ಗಡೆ ದೊಡ್ಡದಾಗಿ ಮರಾಠಿಯಲ್ಲಿ ಶುಭಾಶಯ ಹಾಕಿ ನಂತರ ಕೆಳಗಡೆ ಚಿಕ್ಕದಾಗಿ ಕನ್ನಡದಲ್ಲಿ ಶುಭಾಶಯ ಕೋರಿದ್ದಾರೆ.

ವಾಟ್ಸಪ್ ಗ್ರುಪ್ ಗಳಲ್ಲಿ ಅವರ ಶುಭಾಶಯ ಪತ್ರ ನೋಡಿ ಕನ್ನಡಾಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ. ಅಪ್ಪಟ ಕನ್ನಡಾಭಿಮಾನಿ, ವೈದ್ಯ ಡಾ.ವೀರೇಶ ಪಂಚಾಕ್ಷರಿಮಠ ಅವರು ನೇರವಾಗಿ ಗ್ರುಪ್ ಒಂದರಲ್ಲಿ ಬೆನಕೆ ಶುಭಾಶಯಕ್ಕೆ ಪ್ರತ್ಯುತ್ತರ ನೀಡಿದ್ದಾರೆ. ಅವರ ಉತ್ತರ ಹೀಗಿದೆ –

“ಸರ್ ನಿಮಗೆ ಎಷ್ಟು ಬಾರಿ ಹೇಳಬೇಕು ?  ನಿಮಗೆ ಕನ್ನಡಕ್ಕೆ ಗೌರವ ಕೊಡುವದು ಬರದಿದ್ದರೂ ಸರಿ. ಆದರೆ ಕನ್ನಡಕ್ಕೆ ಅವಮಾನ ಮಾಡುವ ಹಕ್ಕು ನಿಮಗಿಲ್ಲ. ನೀವು ಕರ್ನಾಟಕ ಸರ್ಕಾರದ ಜನಪ್ರತಿನಿಧಿ. ಕನ್ನಡಕ್ಕೆ ಕೊನೇಪಕ್ಷ ಅವಮಾನ ಮಾಡಬೇಡಿ. ಮೊದಲು ಕನ್ನಡ, ಕೆಳಗಡೆ ನಿಮಗೆ ಬೇಕಾದ ಭಾಷೆ ಬರೆಸಿಕೊಳ್ಳಿ. ಪದೇ ಪದೇ ಹೇಳಿಸಿಕೊಳ್ಳುವದು ಅಸಹ್ಯ”


Spread the love

About Laxminews 24x7

Check Also

ಪತಿಯನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದ ಪತ್ನಿ ಹಾಗೂ ಕೊಲೆ ಮಾಡಲು ಯತ್ನಿಸಿದ್ದ ಆರೋಪಿಗೆ ತಲಾ ಹತ್ತು ವರ್ಷ ಜೈಲು ಶಿಕ್ಷೆ

Spread the loveಕಾರವಾರ: ದಾಂಡೇಲಿ ಸಮೀಪದ ಅಂಬೇವಾಡಿ ಗಾಂವಠಾಣ ನಿವಾಸಿ ಅಂಕುಶ್​ ಸುತಾರ ಅವರ ಕೊಲೆಗೆ ಸುಪಾರಿ ಕೊಟ್ಟಿದ್ದ ಪ್ರಕರಣದಲ್ಲಿ ಅಂಕುಶ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ