ಬೆಂಗಳೂರು: ರಾಜ್ಯದ ವಿಧಾನಪರಿಷತ್ತಿಗೆ ವಿವಿಧ ಕ್ಷೇತ್ರಗಳಿಂದ ಆಯ್ಕೆಯಾಗಿದ್ದಂತ 25 ಸದಸ್ಯರ ಕಾಲಾವಧಿ 2022ಕ್ಕೆ ಮುಕ್ತಾಯಗೊಳ್ಳಲಿದೆ. ಆ ಸ್ಥಾನಗಳಿಗೆ ತಮ್ಮದೇ ಪಕ್ಷದ ಸದಸ್ಯರನ್ನು ಆಯ್ಕೆ ಮಾಡಿ, ತುಂಬಿಕೊಳ್ಳಲು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತೆರೆ ಮರೆಯಲ್ಲಿ ಕಸರತ್ತು ನಡೆಸಿವೆ.
ಹಾಗಾದ್ರೇ.. 2022ಕ್ಕೆ ಮುಕ್ತಾಯಗೊಳ್ಳಲಿರುವಂತ 25 ಪರಿಷತ್ ಸದಸ್ಯರು ( Vidhan Parishat Member ) ಯಾರು ಯಾರು.? ಎನ್ನುವ ಮಾಹಿತಿ ಮುಂದೆ ಓದಿ.
ವಿಧಾನ ಪರಿಷತ್ ನಲ್ಲಿ 75 ಸದಸ್ಯರ ಬಲದೊಂದಿಗೆ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದ್ದರೂ, ಸ್ವತಂತ್ರ ನಿರ್ಧಾರ ಕೈಗೊಳ್ಳಲು ಬೇಕಾಗಿರುವಂತ ಸದಸ್ಯರ ಬೆಂಬಲವಿಲ್ಲ. ಯಾವುದೇ ವಿಧೇಯಕವನ್ನು ಅಂಗೀಕರಿಸಲು 38 ಸದಸ್ಯರ ಬಲವನ್ನು ಬಿಜೆಪಿ ಹೊಂದಲೇ ಬೇಕಿರೋ ಅನಿವಾರ್ಯತೆ ಇದೆ. ಇದರ ನಡುವೆ ಈಗ ವಿವಿಧ ಕ್ಷೇತ್ರಗಳಲ್ಲಿ ಆಯ್ಕೆಯಾಗಿರುವಂತ 25 ಸದಸ್ಯರು 2022ಕ್ಕೆ 6 ವರ್ಷ ಕೊನೆಗೊಳ್ಳುತ್ತಿರುವ ಹಿನ್ನಲೆಯಲ್ಲಿ, ಕಾಲಾವಧಿ ಮುಕ್ತಾಯಗೊಳ್ಳಲಿದೆ.
ಈ ಕಾರಣದಿಂದಾಗಿ ಒಟ್ಟು 6 ಬಿಜೆಪಿ ಆಯ್ಕೆಗೊಂಡ ಸದಸ್ಯರು, ಓರ್ವ ಪಕ್ಷೇತರ ಬೆಂಬಲಿತ ಅಭ್ಯರ್ಥಿ ಸೇರಿ 7 ಸ್ಥಾನಗಳು ಖಾಲಿಯಾಗಲಿವೆ. ಇನ್ನೂ ಕಾಂಗ್ರೆನ 13, ಜೆಡಿಎಸ್ ಬೆಂಬಲಿತ ಐವರು ಸದಸ್ಯರ ಸ್ಥಾನಗಳು ತೆರವಾಗಲಿದೆ. ಈ ಸ್ಥಾನಗಳಿಗೆ ಮತ್ತೆ ತಮ್ಮದೇ ಪಕ್ಷದ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳುವಂತ ಕಸರತ್ತು ಆರಂಭಗೊಂಡಿದೆ.
ಹೀಗಿದೆ ಕಾಲಾವಧಿ ಮುಕ್ತಾಯಗೊಳ್ಳುತ್ತಿರುವಂತ 25 ವಿಧಾನ ಪರಿಷತ್ ಸದಸ್ಯರ ಪಟ್ಟಿ
ಬಿಜೆಪಿ ಪಕ್ಷದ ಬೆಂಬಲಿತ ಸದಸ್ಯರ ಪಟ್ಟಿ
- ಕೋಟಾ ಶ್ರೀನಿವಾಸ ಪೂಜಾರಿ – ದಕ್ಷಿಣ ಕನ್ನಡ
- ಬಿ.ಜಿ.ಪಾಟೀಲ್ – ಕಲಬುರ್ಗಿ
- ಪ್ರದೀಪ್ ಶೆಟ್ಟರ್ – ಧಾರವಾಡ
- ಎಂ.ಕೆ.ಪ್ರಾಣೇಶ್ ( ಉಪ ಸಭಾಪತಿ ) – ಚಿಕ್ಕಮಗಳೂರು
- ಸುನೀಲ್ ಸುಬ್ರಹ್ಮಣಿ – ಬಳ್ಳಾರಿ
- ಮಹಂತೇಶ್ ಕವಟಗಿಮಠ – ಬೆಳಗಾವಿ
- vivekrao ಪಾಟೀಲ್ ( ಪಕ್ಷೇತರ ) – ಬೆಳಗಾವಿ
ಕಾಂಗ್ರೆಸ್ ಬೆಂಬಲಿತ ಸದಸ್ಯರ ಪಟ್ಟಿ
- ಎಸ್ ಆರ್ ಪಾಟೀಲ್ ( ಪ್ರತಿಪಕ್ಷ ನಾಯಕ ) – ವಿಜಯಪುರ
- ಪ್ರತಾಪ್ ಚಂದ್ರಶೆಟ್ಟಿ – ದಕ್ಷಿಣ ಕನ್ನಡ
- ಶ್ರೀಕಾಂತ ಲಕ್ಷ್ಮಣ್ ಘೋಟ್ನೇಕರ್ – ಉತ್ತರ ಕನ್ನಡ
- ಆರ್ ಧರ್ಮಸೇನ – ಮೈಸೂರು
- ವಿಜಯ್ ಸಿಂಗ್ – ಬೀದರ್
- ಬಸವರಾಜ ಪಾಟೀಲ್ ಇಟಗಿ – ರಾಯಚೂರು
- ಕೆ.ಸಿ.ಕೊಂಡಯ್ಯ – ಬಳ್ಳಾರಿ
- ಆರ್.ಪ್ರಸನ್ನ ಕುಮಾರ್ – ಶಿವಮೊಗ್ಗ
- ಎಂ.ಎ.ಗೋಪಾಲಸ್ವಾಮಿ – ಹಾಸನ
- ಎಂ.ನಾರಾಯಣಸ್ವಾಮಿ ( ಪ್ರತಿಪಕ್ಷ ಸಚೇತಕ ) – ಬೆಂಗಳೂರು
- ಎಸ್.ರವಿ – ಬೆಂಗಳೂರು ಗ್ರಾಮಾಂತರ
ಜೆಡಿಎಸ್ ಬೆಂಬಲಿತ ಸದಸ್ಯರ ಪಟ್ಟಿ
- ಸಂದೇಶ್ ನಾಗರಾಜ್ – ಮೈಸೂರು
- ಬಸವರಾಜ ಹೊರಟ್ಟಿ ( ಸಭಾಪತಿ ) – ಪಶ್ಚಿಮ ಶಿಕ್ಷಕರ ಕ್ಷೇತ್ರ
- ಸಿ.ಆರ್.ಮನೋಹರ್ – ಕೋಲಾರ
- ಕಾಂತರಾಜು – ತುಮಕೂರು
- ಇವರಲ್ಲದೇ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರದ ಪರಿಷತ್ ಸದಸ್ಯರ ಕಾಲಾವಧಿ ಕೂಡ ಮುಕ್ತಾಯಗೊಳ್ಳಲಿದೆ.