ಹೈದರಾಬಾದ್ (ತೆಲಂಗಾಣ): ದೀಪಾವಳಿ ಸಮಯದಲ್ಲಿ ಹೈದರಾಬಾದ್ನಲ್ಲಿ ಕೋಣಗಳ ಉತ್ಸವ ನಡೆಯುತ್ತದೆ. ಇದಕ್ಕೆ ಸದರ್ ಉತ್ಸವ ಎನ್ನುತ್ತಾರೆ. ಇದಕ್ಕಾಗಿ ಕೋಣಗಳಿಗೆ ಶೃಂಗಾರ ಮಾಡುವುದು, ಅವುಗಳನ್ನು ಉತ್ಸವಕ್ಕೆ ಸಜ್ಜುಗೊಳಿಸಲಾಗುವುದು, ಮಿರಮಿರ ಮಿಂಚುಗ ಕೋಣಗಳನ್ನು ನೋಡುವುದೇ ಒಂದು ಅಂದ.
ಇವುಗಳಿಂದ ಹಲವಾರು ರೀತಿಯ ಸಾಹಸಗಳನ್ನೂ ಈ ಸಮಯದಲ್ಲಿ ಮಾಡಿಸಲಾಗುವುದು.
ಇನ್ನು ನಿಜಾಮರ ಕಾಲದಿಂದಲೂ ಸದರ್ ಉತ್ಸವ ಪ್ರತಿ ವರ್ಷ ನಡೆಯುತ್ತಿದ್ದು, ಹಸುಗಳು, ಎಮ್ಮೆ, ಎತ್ತು ಕೋಣಗಳನ್ನು ಈ ಉತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ.
ಈ ಉತ್ಸವದಲ್ಲಿ ಪಾಲ್ಗೊಳ್ಳಲು ಬೇರೆ ಬೇರೆ ರಾಜ್ಯಗಳಿಂದಲೂ ಜನರು ಬರುತ್ತಾರೆ. ಇದೀಗ ಈ ವರ್ಷದ ಹೈಲೈಟ್ ಬಾಹುಬಲಿ. ಬಾಹುಬಲಿ ಎಂದು ಹೆಸರು ಇರುವ ಕೋಣವನ್ನು ಹರಿಯಾಣದಿಂದ ತರಿಸಲಾಗಿದೆ.
ಅದಕ್ಕೆ ಬಾಹುಬಲಿ ಕೋಣ ಎಂದು ಹೆಸರಿಡಲಾಗಿದೆ. ಹೈದರಾಬಾದ್ನ ಚಾಪೆಲ್ ಬಜಾರ್ನ ಲಡ್ಡು ಯಾದವ್ ಎಂಬುವವರಿಗೆ ಸೇರಿರುವ ಈ ಕೋಣವನ್ನು ಹರಿಯಾಣದ ಬಲ್ವೀರ್ ಸಿಂಗ್ ಎಂಬುವವರು ತಂದು ಪ್ರದರ್ಶಿಸಿದ್ದಾರೆ. ಈ ಕೋಣ ಇಷ್ಟು ಹೈಲೈಟ್ ಆಗಲು ಕಾರಣ ಏಕೆಂದರೆ ಅದಕ್ಕೆ ಹಾಕಿರುವ ಚಿನ್ನದ ಸರ!
ಸುಮಾರು 3 ಕೆ.ಜಿ ತೂಕವಿರುವ, ಒಂದೂವರೆ ಕೋಟಿ ಬೆಲೆ ಬಾಳುವ ಚಿನ್ನದ ಸರವನ್ನು ಕೋಣಕ್ಕೆ ತೊಡಿಸಲಾಗಿದೆ. ಇದೀಗ ಮಿರಮಿರ ಮಿಂಚುತ್ತಿದ್ದ ನೋಡುಗರ ಕಣ್ಮನ ಸೆಳೆಯುತ್ತಿದೆ.