Breaking News

ಪಡಿತರ ಚೀಟಿದಾರರಿಗೆ ಬಿಗ್ ಶಾಕ್ : ನವೆಂಬರ್ 30 ರ ನಂತ್ರ `ಗರೀಬ್ ಕಲ್ಯಾಣ್ ಯೋಜನೆ’ ವಿಸ್ತರಣೆ ಇಲ್ಲ

Spread the love

ನವದೆಹಲಿ : ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) (Pradhan Mantri Garib Kalyan Anna Yojana) ಅಡಿಯಲ್ಲಿ, ನವೆಂಬರ್ ನಂತ್ರ ಬಡವರಿಗೆ ಉಚಿತ ಪಡಿತರ ಸಿಗುವುದಿಲ್ಲ. ವಾಸ್ತವವಾಗಿ, ಕೇಂದ್ರ ಸರ್ಕಾರದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಸುಧಾಂಶು ಪಾಂಡೆ ಅವ್ರು, ಈ ಕುರಿತು ಸ್ಪಷ್ಟನೆ ನೀಡಿದ್ದು, ನವೆಂಬರ್ ನಂತ್ರ ಈ ಯೋಜನೆಯಡಿ ಉಚಿತ ಪಡಿತರ ವಿತರಣೆಯನ್ನ ವಿಸ್ತರಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಶುಕ್ರವಾರ ಹೇಳಿದರು.

ದೇಶದ ಆರ್ಥಿಕತೆ ಮತ್ತೆ ಹಳಿಗೆ ಮರಳುತ್ತಿದೆ, ಆದ್ದರಿಂದ ಉಚಿತ ಪಡಿತರ ಒದಗಿಸುವ ಯೋಜನೆಯನ್ನ ಮುಂದಕ್ಕೆ ಕೊಂಡೊಯ್ಯುವ ಯಾವುದೇ ಪ್ರಸ್ತಾಪವಿಲ್ಲ ಎಂದು ಪಾಂಡೆ ಸ್ಪಷ್ಟಪಡಿಸಿದ್ರು.

ಅಂದ್ಹಾಗೆ, ಕೇಂದ್ರ ಸರ್ಕಾರ ಕಳೆದ ವರ್ಷದಿಂದ ಈ ಯೋಜನೆಯಡಿ ಬಡ ಕುಟುಂಬಗಳಿಗೆ ಉಚಿತ ಪಡಿತರ ಒದಗಿಸುತ್ತಿದ್ದುದನ್ನ ಸ್ಮರಿಸಬಹುದು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನ ಕಳೆದ ವರ್ಷ ಮಾರ್ಚ್ʼನಲ್ಲಿ ಘೋಷಿಸಲಾಯಿತು. ಆರಂಭದಲ್ಲಿ ಈ ಯೋಜನೆಯನ್ನ ಏಪ್ರಿಲ್-ಜೂನ್ 2020ರ ಅವಧಿಗೆ ಪ್ರಾರಂಭಿಸಲಾಯಿತಾದ್ರು, ನಂತ್ರ ನವೆಂಬರ್ 30, 2021 ಕ್ಕೆ ವಿಸ್ತರಿಸಲಾಯಿತು.

 

ಆಹಾರ ಕಾರ್ಯದರ್ಶಿ ಪಾಂಡೆ, ‘ಆರ್ಥಿಕತೆಯು ಮತ್ತೆ ಹಳಿಗೆ ಮರಳುತ್ತಿರುವುದರಿಂದ ಮತ್ತು ನಮ್ಮ ಒಎಂಎಸ್‌ಎಸ್ (ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ) ಸಹ ಈ ವರ್ಷ ಉತ್ತಮವಾಗಿದೆ. ಆದ್ದರಿಂದ, ಪಿಎಂಜಿಕೆವೈ ವಿಸ್ತರಿಸುವ ಯಾವುದೇ ಪ್ರಸ್ತಾಪವಿಲ್ಲ’ ಎಂದರು.

 

ಸಬ್ಸಿಡಿ ಆಹಾರ ಧಾನ್ಯಗಳ ಜೊತೆಗೆ ಉಚಿತ ಪಡಿತರ..!
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ ಎಫ್ ಎಸ್ ಎ) ಅಡಿಯಲ್ಲಿ 80 ಕೋಟಿ ಪಡಿತರ ಚೀಟಿದಾರರಿಗೆ ಉಚಿತ ಪಡಿತರವನ್ನು ಗುರುತಿಸಲಾಗಿದೆ. ಅವರಿಗೆ ವಿತರಿಸಬೇಕಾದ ಸಬ್ಸಿಡಿ ಆಹಾರ ಧಾನ್ಯಗಳ ಜೊತೆಗೆ ಪಡಿತರ ಅಂಗಡಿಗಳ ಮೂಲಕ ಉಚಿತ ಪಡಿತರವನ್ನ ನೀಡಲಾಗುತ್ತೆ.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ