Breaking News

ರಾಜ್ ಕುಟುಂಬದ ಮನವಿ ನಂತರವೂ ದುಡುಕಿದ ಅಪ್ಪು ಫ್ಯಾನ್ಸ್: ಮತ್ತಿಬ್ಬರು ಅಭಿಮಾನಿಗಳ ಸಾವು

Spread the love

ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಬ್ಬರು ಮೃತಪಟ್ಟ ಘಟನೆ ಕೊಳ್ಳೆಗಾಲ ಮತ್ತು ತುಮಕೂರಿನಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ಪಟ್ಟಣದಲ್ಲಿ ಅಭಿಮಾನಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.

ಕೊಳ್ಳೆಗಾಲದ ಭೀಮನಗರದ ನಿವಾಸಿ ಶಿವಮೂರ್ತಿ ಮೃತಪಟ್ಟವರು ಎಂದು ಹೇಳಲಾಗಿದೆ.

ತುಮಕೂರು ತಾಲೂಕಿನ ಅರೇಗುಜ್ಜನಹಳ್ಳಿಯಲ್ಲಿ 27 ವರ್ಷದ ರವಿಕುಮಾರ ಮೃತಪಟ್ಟಿದ್ದಾರೆ. ಪುನೀತ್ ರಾಜಕುಮಾರ್ ನಿಧನದ ನಂತರ ಊಟವನ್ನು ಬಿಟ್ಟಿದ್ದ ರವಿಕುಮಾರ್ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆನ್ನಲಾಗಿದೆ.

ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಅವರು, ದುಡುಕಿನ ನಿರ್ಧಾರ ಕೈಗೊಳ್ಳದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ನಿಮಗೂ ಕುಟುಂಬ, ಸಂಸಾರ ಇರುತ್ತದೆ. ಇದರಿಂದ ನಮಗೂ ನೋವಾಗುತ್ತದೆ. ಯಾರೂ ದುಡುಕಬಾರದು ಎಂದು ಮನವಿ ಮಾಡಿದ್ದಾರೆ. ಹೀಗಿದ್ದರೂ ಅಭಿಮಾನಿಗಳು ನೆಚ್ಚಿನ ನಟನ ಅಗಲಿಕೆಯ ನೋವು ತಾಳಲಾರದೇ ದುಡುಕಿನ ನಿರ್ಧಾರ ಕೈಗೊಳ್ಳುತ್ತಿದ್ದಾರೆ.


Spread the love

About Laxminews 24x7

Check Also

ಚೇರಿಯಲ್ಲಿ ರಾಜ್ಯದ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೇವಾಲಾ (Randeep Surjewala) ಅವರನ್ನು ಭೇಟಿಯಾದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅಥಣಿ ಶಾಸಕ ಲಕ್ಷ್ಮಣ ಸವದಿ, ಪ್ರಮುಖವಾಗಿ ಪಕ್ಷದ ಸಂಘಟನೆ ವಿಷಯದಲ್ಲಿ ಚರ್ಚೆ

Spread the loveಬೆಂಗಳೂರು, ಜುಲೈ 7: ಕೆಪಿಸಿಸಿ ಕಚೇರಿಯಲ್ಲಿ ರಾಜ್ಯದ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೇವಾಲಾ (Randeep Surjewala) ಅವರನ್ನು ಭೇಟಿಯಾದ ನಂತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ