Breaking News

ಪತ್ನಿಗೆ ವಿಡಿಯೋ ಕರೆ ಮಾಡಿ ಆಕೆಯ ಕಣ್ಣೇದುರೇ ನೇಣುಬಿಗಿದುಕೊಂಡ ಜೈಲು ವಾರ್ಡನ್‌

Spread the love

ಶಿವಮೊಗ್ಗ: ಕೇಂದ್ರ ಕಾರಾಗೃಹದಿಂದಲೇ ಪತ್ನಿಗೆ ವಿಡಿಯೋ ಕರೆ ಮಾಡಿದ ಜೈಲು ವಾರ್ಡನ್‌ವೊಬ್ಬರು ಆಕೆಯ ಕಣ್ಣೇದುರೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದಲ್ಲಿ ಸಂಭವಿಸಿದೆ.

ಹುಕ್ಕೇರಿ ತಾಲೂಕು ಹೊಸೂರಿನ ಬಾಬು ದಸ್ತಗಿರ್ ತಗರಿ ಎಂಬುವರ ಪುತ್ರ ಅಸ್ಪಾಕ್ ತಗಡಿ(24) ಆತ್ಮಹತ್ಯೆ ಮಾಡಿಕೊಂಡ ಜೈಲ್ ವಾರ್ಡನ್.

ಈ ಹಿಂದೆ ಬೆಂಗಳೂರಿನ ಕೆಎಸ್‌ಆರ್‌ಪಿಯಲ್ಲಿ ಪೇದೆಯಾಗಿದ್ದ ಅಸ್ಪಾಕ್, ಕಳೆದ ಎರಡು ವರ್ಷದಿಂದ ಜೈಲು ವಾರ್ಡನ್ ಆಗಿ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷವಷ್ಟೇ ಹುಕ್ಕೇರಿ ತಾಲೂಕಿನ ಯುವತಿ ಜತೆ ಅಸ್ಪಾಕ್​ ಮದುವೆ ಆಗಿದ್ದ. ದಂಪತಿಗೆ 20 ದಿನದ ಹೆಣ್ಣುಮಗು ಇದೆ.

ದಾಂಪತ್ಯದಲ್ಲಿ ಮೂಡಿತ್ತು ಬಿರುಕು: ಅಸ್ಪಾಕ್ ದಾಂಪತ್ಯದಲ್ಲಿ ಆರಂಭದಲ್ಲಿಯೇ ಬಿರುಕು ಕಾಣಿಸಿಕೊಂಡಿತ್ತು. ಪತ್ನಿ ತವರು ಮನೆ ಸೇರಿಕೊಂಡಿದ್ದಳು. ಬುಧವಾರ ರಾತ್ರಿ ಪತ್ನಿಗೆ ವಿಡಿಯೋ ಕಾರೆ ಮಾಡಿದ್ದ ಅಸ್ಪಾಕ್ ಮಾತನಾಡಿದ್ದರು. ಆ ಸಂದರ್ಭದಲ್ಲಿ ಅತ್ತೆ-ಮಾವನ ಜತೆ ಜಗಳವಾಡಿದ್ದರು. ವಿಡಿಯೋ ಕಾಲ್​ನಲ್ಲಿಯೇ ಜಗಳ ಜೋರಾಗಿ ನಡೆದಿತ್ತು. ಹತಾಶಗೊಂಡ ಅಸ್ಪಾಕ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು.

ಕಿಟಕಿ ಬಳಿ ಮೊಬೈಲ್ ಇಟ್ಟು ವಿಡಿಯೋ ಕರೆ ಮೂಲಕ ತಾನು ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯವನ್ನು ಲೈವ್ ಆಗಿ ಪತ್ನಿ ಮತ್ತು ಅತ್ತೆ-ಮಾವನಿಗೆ ಕಾಣುವಂತೆ ಅಸ್ಪಾಕ್​ ಮಾಡಿದ್ದರು. ಈ ದೃಶ್ಯ ಕಂಡ ಪತ್ನಿ, ರೀ ಬೇಡ…ಬೇಡ… ಎಂದು ಪತ್ನಿ ಗೋಗರೆದರೂ ಕೇಳಲಿಲ್ಲ. ಆತಂಕಗೊಂಡ ಪತ್ನಿ ತಕ್ಷಣ ಜೈಲು ಅಧೀಕ್ಷಕರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದರು. ತಕ್ಷಣ ವಸತಿ ಗೃಹದಲ್ಲಿದ್ದ ಇತರೆ ಸಿಬ್ಬಂದಿ ಬಾಗಿಲು ಒಡೆದು ಹೋಗುವಷ್ಟರಲ್ಲಿ ಅಸ್ಪಾಕ್ ಮೃತಪಟ್ಟಿದ್ದರು ಎನ್ನಲಾಗಿದೆ. ಪತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಣ್ಣಾರೆ ಕಂಡ ಪತ್ನಿ ಆಘಾತಕ್ಕೊಳಗಾಗಿದ್ದಾರೆ. ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ತುಂಗಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


Spread the love

About Laxminews 24x7

Check Also

ಪತಿಯನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದ ಪತ್ನಿ ಹಾಗೂ ಕೊಲೆ ಮಾಡಲು ಯತ್ನಿಸಿದ್ದ ಆರೋಪಿಗೆ ತಲಾ ಹತ್ತು ವರ್ಷ ಜೈಲು ಶಿಕ್ಷೆ

Spread the loveಕಾರವಾರ: ದಾಂಡೇಲಿ ಸಮೀಪದ ಅಂಬೇವಾಡಿ ಗಾಂವಠಾಣ ನಿವಾಸಿ ಅಂಕುಶ್​ ಸುತಾರ ಅವರ ಕೊಲೆಗೆ ಸುಪಾರಿ ಕೊಟ್ಟಿದ್ದ ಪ್ರಕರಣದಲ್ಲಿ ಅಂಕುಶ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ