Breaking News

ದೊಡ್ಡ ರಾಜ್ಯಗಳ ಪೈಕಿ ಉ.ಪ್ರ.ದಲ್ಲಿ ಅತ್ಯಂತ ಕಳಪೆ ಆಡಳಿತ, ಉತ್ತಮ ಆಡಳಿತದಲ್ಲಿ ಕೇರಳ ನಂ.1

Spread the love

ಹೊಸದಿಲ್ಲಿ, ನ.4: ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗೆ ಆರು ತಿಂಗಳಿಗೂ ಕಡಿಮೆ ಸಮಯ ಬಾಕಿಯಿರುವಂತೆಯೇ ಆದಿತ್ಯನಾಥ ಸರಕಾರಕ್ಕೆ ಇರಿಸುಮುರಿಸು ಉಂಟು ಮಾಡುವ ಸಮೀಕ್ಷೆಯೊಂದು ಪ್ರಕಟವಾಗಿದೆ. ಅತ್ಯಂತ ಕಳಪೆ ಆಡಳಿತವಿರುವ ದೊಡ್ಡ ರಾಜ್ಯವೆಂಬ ಅಪಖ್ಯಾತಿ ಉತ್ತರಪ್ರದೇಶಕ್ಕೆ ದೊರೆತಿದೆ.

 

ರಾಜ್ಯಗಳ ಆಡಳಿತವನ್ನು ಮೌಲ್ಯಮಾಪನ ಮಾಡುವ ಬೆಂಗಳೂರು ಮೂಲದ ‘ಥಿಂಕ್ ಟ್ಯಾಂಕ್ ಪಬ್ಲಿಕ್ ಎಫೇರ್ಸ್ ಸೆಂಟರ್’ ಸಿದ್ಧಪಡಿಸಿರುವ ಸೂಚ್ಯಂಕದಲ್ಲಿ ಆಡಳಿತ ಗುಣಮಟ್ಟದಲ್ಲಿ ಉತ್ತರ ಪ್ರದೇಶವು ಕೊನೆಯ ರ‍್ಯಾಂಕ್ ಪಡೆದಿದ್ದು, 18ನೇ ಸ್ಥಾನದಲ್ಲಿದೆ.

ಬೆಳವಣಿಗೆ,ನೀತಿ ಹಾಗೂ ಸುಸ್ಥಿರತೆ ಈ ಮೂರು ವಿಸ್ತೃತವಾದ ಅಂಶಗಳನ್ನು ಆಧರಿಸಿ ರಾಜ್ಯಗಳಿಗೆ ಸಮಗ್ರ ಅಂಕಗಳನ್ನು ನೀಡಲಾಗಿದೆ. ಆಡಳಿತದ 43 ಸೂಚಕಗಳನ್ನು ಆಧರಿಸಿ ರ‍್ಯಾಂಕಿಂಗ್ ನೀಡಲಾಗುತ್ತಿದೆ.

ಕೇರಳವು ಮತ್ತೊಮ್ಮೆ ದೇಶದಲ್ಲೇ ಅತ್ಯುತ್ತಮ ಆಡಳಿತವಿರುವ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ನಂ.1 ರ‍್ಯಾಂಕ್ ಪಡೆದಿದೆ. ಐದು ವರ್ಷಗಳಿಂದ ಹಿಂದೆ ಪಿಎಸಿಯು ಈ ರ‍್ಯಾಂಕಿಂಗ್ ಅನ್ನು ಪ್ರಕಟಿಸಲು ಆರಂಭಿಸಿದಾಗಿನಿಂದ ಕೇರಳವು ಸತತವಾಗಿ ಪ್ರಥಮ ಸ್ಥಾನವನ್ನು ಉಳಿಸಿಕೊಳ್ಳುತ್ತಲೇ ಬಂದಿದೆ. ಈ ಪೈಕಿ ಕರ್ನಾಟಕ ನಾಲ್ಕನೇ ಸ್ಥಾನ ಪಡೆದಿದೆ ಎಂದು ವರದಿ ಉಲ್ಲೇಖಿಸಿದೆ.

2016ರಲ್ಲಿ ಪಿಎಸಿಯು ರ‍್ಯಾಂಕಿಂಗ್ ಪ್ರಥಮ ಆವೃತ್ತಿಯನ್ನು ಆರಂಭಿಸಿದಾಗ ಉತ್ತರಪ್ರದೇಶ 12ನೇ ಸ್ಥಾನದಲ್ಲಿತ್ತು. ಮಧ್ಯಪ್ರದೇಶ, ಅಸ್ಸಾಂ, ಒಡಿಶಾ, ಜಾರ್ಖಂಡ್ ಹಾಗೂ ಬಿಹಾರ ರಾಜ್ಯಗಳಿಗಿಂತ ಅದರ ರ‍್ಯಾಂಕಿಂಗ್ ಉತ್ತಮವಾಗಿತ್ತು. ಆದರೆ 2017ರಲ್ಲಿ ಆ ರಾಜ್ಯದ ರ‍್ಯಾಂಕಿಂಗ್ 16ನೇ ಸ್ಥಾನಕ್ಕೆ ಜಾರಿತ್ತು. 2019ರಲ್ಲಿ ಅದು 17 ಸ್ಥಾನಕ್ಕೆ ಕುಸಿಯಿತು ಮತ್ತು ಒಡಿಶಾಕ್ಕಿಂತ ಮಾತ್ರವೇ ಮುಂದಿತ್ತು. ಆದರೆ 2020ರಲ್ಲಿ 18 ನೇ ರ‍್ಯಾಂಕ್ ಗೆ ಕುಸಿಯುವ ಮೂಲಕ ಕಳಪೆ ನಿರ್ವಹಣೆ ಪ್ರದರ್ಶಿಸಿದೆ.

ಯೋಗಿ ಆದಿತ್ಯನಾಥ್ ಸರಕಾರದ ಆಳ್ವಿಕೆಯಲ್ಲಿ ಉತ್ತರಪ್ರದೇಶಲ್ಲಿ ಅಭಿವೃದ್ಧಿಯ ಪರ್ವ ಆರಂಭಗೊಂಡಿದೆಯೆಂದು ಬಿಜೆಪಿಯು ಬಿಂಬಿಸಲು ಯತ್ನಿಸುತ್ತಿರುವಂತೆಯೇ ಆ ರಾಜ್ಯವು ಆಡಳಿತ ರ್ಯಾಂಕಿಂಗ್ ಕಳಪೆ ಸ್ಥಾನದಲ್ಲಿರುವುದು ಕಮಲ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆಯೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ