ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಪ್ರಥಮ್ ವಿರುದ್ಧ ಪ್ರಕರಣ ದಾಖಲಾಗಿದೆ.ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಸ್‌ಡಿಪಿಐ ಸದಸ್ಯ ಉಮರ್ ಫಾರೂಕ್ ಎಂಬವರು ದೂರು ನೀಡಿದ್ದಾರೆ. ದೂರಿನ ಅನ್ವಯ ಐಪಿಸಿ ಸೆಕ್ಷನ್ 295(ಧಾರ್ಮಿಕ ಭಾವನೆಗೆ ಧಕ್ಕೆ) ಅಡಿ ಪ್ರಕರಣ ದಾಖಲಾಗಿದೆಚಿತ್ರನಟ ಪ್ರಥಮ್ ಫೇಸ್‌ಬುಕ್‌ನಲ್ಲಿ ಮುಸ್ಲಿಮ್ ಸಮುದಾಯದ ಧಾರ್ಮಿಕ ಭಾವನೆಗೆ ನೋವುಂಟು ಮಾಡುವಂತಹ , ಇಂತಹ ಮುಗ್ಧ ಮುಸ್ಲಿಮ್‌ಗಳು ಅನ್ ಎಜ್ಯುಕೇಟೆಡ್ ಇರಬೇಕು. ಇಲ್ಲ ಅಂದ್ರೆ ಅಲ್ಲಾ ಪವಾಡ ಮಾಡಿರಬೇಕು. 4 ತಿಂಗಳು ವ್ಯತ್ಯಾಸ ಲೇ ಹೆಂಗೆ ಎರಡು ಮಕ್ಕಳು ಹುಟ್ಟೋಕೆ ಸಾಧ್ಯ? ಸೈನ್ಸ್‌ಗೆ ಅಸಾಧ್ಯವಾದದ್ದು ಅಲ್ಲಾಗೆ ಮಾತ್ರ ಸಾಧ್ಯ. ಖುದಾಫೀಸ್. ಸಬ್ ಅಲ್ಲಕ್ ಮೆಹರುಬಾನಿ! ಎಂಬ ಸಂದೇಶವನ್ನು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶವನ್ನು ಹರಿಯಬಿಟ್ಟಿದ್ದಾರೆ. ಧಾರ್ಮಿಕ ಭಾವನೆಗೆ ಧಕ್ಕೆ ತರುವ, ಸೌಹಾರ್ದತೆಯನ್ನು ಕೆಡಿಸುವ ಹಾಗೂ ಸಾಮಾಜಿಕ ಶಾಂತಿ ಕದಡುವ ಉದ್ದೇಶವನ್ನು ಹೊಂದಿರುವ ಸಂದೇಶವನ್ನು ಫೇಸ್‌ಬುಕ್ ಖಾತೆಯಿಂದಲೇ ಹಾಕಿರುವ ಪ್ರಥಮ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ.
Check Also
‘I Am god’ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ….ಯುವ ಪ್ರತಿಭೆ ರವಿ ಗೌಡ ಹೊಸ ಸಿನಿಮಾಗೆ ಸಾಥ್.
Spread the loveಬೆಂಗಳೂರು:ರಾಜಕೀಯ ಜಂಜಾಟಗಳ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುವು ಮಾಡಿಕೊಂಡು ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಅಂತೆಯೆ ಅವರು ತಮ್ಮ …