Breaking News

ಮತ್ತೆ ಏರಿದ ಪೆಟ್ರೋಲ್​ ಬೆಲೆ; ರಾಜ್ಯದಲ್ಲಿ ಎಷ್ಟಾಗಿದೆ ಇಂಧನ ದರ?

Spread the love

ಬೆಂಗಳೂರು: ವಾಹನ ಸವಾರರಿಗೆ ಮತ್ತೆ ಶಾಕಿಂಗ್ ನ್ಯೂಸ್ ಸಿಕ್ಕಿದ್ದು, ಇಂದು ಕೂಡ ಪೆಟ್ರೋಲ್​ ಮತ್ತು ಡಿಸೇಲ್ ಬೆಲೆಯಲ್ಲಿ ಏರಿಕೆ ಕಂಡಿದೆ. ನೆನ್ನೆ ಪೆಟ್ರೋಲ್-ಡೀಸೆಲ್​ ದರಗಳಲ್ಲಿ ಏರಿಕೆ ಕಂಡುಬಂದಿದ್ದು, ಪೆಟ್ರೋಲ್ ದರದಲ್ಲಿ 36 ಪೈಸೆ ಮತ್ತು ಡೀಸೆಲ್ ದರದಲ್ಲಿ 37 ಪೈಸೆ ಏರಿಕೆಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 35 ಪೈಸೆ ಮತ್ತು ಲೀಟರ್ ಡೀಸೆಲ್​ ದರದಲ್ಲಿ 36 ಪೈಸೆ ಹೆಚ್ಚಳವಾಗಿದೆ. ಇದರಂತೆ ದೆಹಲಿಯಲ್ಲಿ ಲೀಟರ್​ ಪೆಟ್ರೋಲ್​ ದರ 108.19ಕ್ಕೆ ಮತ್ತು ಡೀಸೆಲ್​ ದರ 97.09ಕ್ಕೆ ಏರಿಕೆಯಾಗಿದೆ. ಇನ್ನು ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 114.1 ರೂ ಡೀಸೆಲ್​ ದರ 105.08ರೂ ಗೆ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 108.75 ರೂಗೆ ಮತ್ತು ಡೀಸೆಲ್ ದರ ಪ್ರತೀ ಲೀಟರ್ ಗೆ 100.1ರೂಗೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ರೂ. 112.02ಗೆ ಮತ್ತು ಡೀಸೆಲ್​ ದರ 102.94ಕೆ ಏರಿಕೆ ಕಂಡರೆ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 105.1 ರೂ, ಡೀಸೆಲ್​ ದರ 101.22ರೂಗೆ ಏರಿಕೆಯಾಗಿದೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ