ಸುಕುಮಾರ್ ನಿರ್ದೇಶನದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ‘ಪುಷ್ಪ’ ಸಿನಿಮಾದ ಮೂರನೇ ಹಾಡನ್ನು ಅಕ್ಟೋಬರ್ 28ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದಾರೆ ‘ಸಾಮಿ ಸಾಮಿ’ ಎಂಬ ಈ ಹಾಡಿನ ಪ್ರೋಮೋ ಈಗಾಗಲೇ ಆದಿತ್ಯ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ.
!
ಡಿಸೆಂಬರ್ 17ರಂದು ಈ ಚಿತ್ರ ತೆರೆಮೇಲೆ ಬರಲಿದ್ದು ಅಲ್ಲು ಅರ್ಜುನ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಫಹಾದ್ ಫಾಸಿಲ್ ಸೇರಿದಂತೆ ಜಗಪತಿ ಬಾಬು, ಅನಸೂಯ ಭಾರದ್ವಾಜ್, ಪ್ರಕಾಶ್ ರಾಜ್, ಡಾಲಿ ಧನಂಜಯ್ ಸೇರಿದಂತೆ ಈ ಚಿತ್ರದಲ್ಲಿ ಹಲವರ ತಾರಾಬಳಗವಿದೆ.