ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ.
ಗೂಳಪ್ಪ ಹೊಸಮನಿ ಅವರನ್ನು ಅಧ್ಯಕ್ಷಸ್ಥಾನದಿಂದ ಕಿತ್ತು ಹಾಕಲಾಗಿದ್ದು, ಸಂಜಯ ಬೆಳಗಾಂವ್ಕರ್ ನೂತನ ಅಧ್ಯಕ್ಷರಾಗಿದ್ದಾರೆ. ಮುಂದಿನ 3 ವರ್ಷಗಳವರೆಗೆ ಸಂಜಯ ಬೆಳಗಾಂವ್ಕರ್ ಬುಡಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಗೂಳಪ್ಪ ಹೊಸಮನಿ ಅವರ ಬಗ್ಗೆ ಬೆಳಗಾವಿಯ ಬಿಜೆಪಿಯ ಇಬ್ಬರು ಶಾಸಕರೂ ತೀವ್ರ ಅಸಮಾಧಾನ ಹೊಂದಿದ್ದರು.
ಇದೀಗ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದ್ದು, ಹೊಸ ಅಧ್ಯಕ್ಷರು ಯಾವ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಲಿದ್ದಾರೆ ಕಾದು ನೋಡಬೇಕಿದೆ.
Laxmi News 24×7