ಬೆಳಗಾವಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುವಂತೆ ದಿ.ಸುರೇಶ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಅವರನ್ನು ವಿವಿಧ ಹಳ್ಳಿಗಳ ಮುಖಂಡರು ಬುಧವಾರ ಒತ್ತಾಯಿಸಿದರು.
ಸಂಸದೆ ಮಂಗಲಾ ಅಂಗಡಿ ಅವರ ಗೃಹ ಕಚೇರಿಯಲ್ಲಿ ಸಂಸದರೊಂದಿಗೆ ಅವರ ಪುತ್ರಿ ಶ್ರದ್ಧಾ ಅವರೊಂದಿಗೆ ಮಾತನಾಡಿದ ಮುಖಂಡರು ಕ್ಷೇತ್ರಕ್ಕೆ ಚುನಾವಣಾ ರಾಜಕಾರಣಕ್ಕೆ ಆಹ್ವಾನಿಸಿದರು. ‘ಸುರೇಶ ಅಂಗಡಿ ಅವರು ಇದ್ದಾಗ ಅವರನ್ನು ಬೆಂಬಲಿಸಿದ್ದೇವೆ. ಕ್ರಿಯಾಶೀಲರಾಗಿರುವ ನೀವು ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಬೆಂಬಲಿಸುವುದಕ್ಕೆ ಸಿದ್ಧವಿದ್ದೇವೆ’ ಎಂದು ತಿಳಿಸಿದರು. ಅವರಲ್ಲಿ ಕೆಲವರು ಗ್ರಾ.ಪಂ. ಸದಸ್ಯರೂ ಇದ್ದರು.
ಅವರ ಆಹ್ವಾನಕ್ಕೆ ಪ್ರತಿಕ್ರಿಯಿಸಿದ ಶ್ರದ್ಧಾ, ‘ತಾಯಿ (ಮಂಗಲಾ) ಸಂಸದೆಯಾಗಿದ್ದಾರೆ. ನಾವೇನೇ ತೀರ್ಮಾನ ಕೈಗೊಳ್ಳುವುದಕ್ಕೂ ಹೈಕಮಾಂಡ್ ಸಮ್ಮತಿ ಬೇಕಾಗುತ್ತದೆ. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು’ ಎಂದಷ್ಟೆ ಹೇಳಿದ್ದಾರೆ.
Laxmi News 24×7