Breaking News

ಕೆಎಸ್​ಆರ್​ಟಿಸಿ ಬಸ್ ಅ​ನ್ನೇ ಖತರ್ನಾಕ್​ ಖದೀಮರು ಕದ್ದೊಯ್ದು ಅಚ್ಚರಿ ಮೂಡಿಸಿದ್ದಾರೆ.

Spread the love

ತುಮಕೂರು: ಕಳ್ಳರು ಚಿನ್ನ, ಬೆಳ್ಳಿ, ಹಣ ಕದ್ದು ಪರಾರಿಯಾಗೋದು ಕಾಮನ್. ಆದರೆ ಇಲ್ಲಿ ಕೆಎಸ್​ಆರ್​ಟಿಸಿ ಬಸ್ ಅ​ನ್ನೇ ಖತರ್ನಾಕ್​ ಖದೀಮರು ಕದ್ದೊಯ್ದು ಅಚ್ಚರಿ ಮೂಡಿಸಿದ್ದಾರೆ.

ಹೌದು.. ಜಿಲ್ಲೆಯ ಗುಬ್ಬಿ ಬಸ್​ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ಅ​ನ್ನ ಕದ್ದೊಯ್ದ ಕಳ್ಳರು, ಸಿ.ಎಸ್. ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜನ್ನೇನಹಳ್ಳಿ ಗ್ರಾಮದ ಬಳಿ ಬಿಟ್ಟು ಪರಾರಾಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಸ್ಸಿನಲ್ಲಿದ್ದ ಡಿಸೇಲ್ ಕದ್ದು ಬಳಿಕ ಬಿಟ್ಟು ಹೋಗಿರುವ ಶಂಕೆಯನ್ನ ಪೊಲೀಸರು ವ್ಯಕ್ತಪಡಿಸಿದ್ದಾರೆ. ಸಾರಿಗೆ ಅಧಿಕಾರಿಗಳು ಎಡೆಯೂರು ಕುಣಿಗಲ್ ಅಮೃತೂರು ಸುತ್ತಾಡಿ ಜನ್ನೆನಹಳ್ಳಿ ಬಳಿ ಬಸ್ ಬಿಟ್ಟು ಎಸ್ಕೇಪ್​ ಆಗಿದ್ದಾರೆ ಎಂಬ ಸಂಶಯವನ್ನ ವ್ಯಕ್ತಪಡಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ಪದೆ ಪದೇ ಇಂತಹ ಘಟನೆ ನಡೆಯುತ್ತಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಅಸ್ಸಾಂ, ತಮಿಳುನಾಡು, ಕೇರಳಕ್ಕೆ ಏ.9 ರಂದು ಚುನಾವಣೆ – ಮೇ 4 ರಂದು ಫಲಿತಾಂಶ

Spread the loveನವದೆಹಲಿ: 4 ರಾಜ್ಯ  ಮತ್ತು 1 ಕೇಂದ್ರಾಡಳಿತ ಪ್ರದೇಶದ ಚುನಾವಣೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಅಸ್ಸಾಂ, ತಮಿಳುನಾಡು,ಕೇರಳ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ