ಹಾಸನ: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಕಾರು ಹತ್ತಿಸಿ ಓರ್ವನ ಹತ್ಯೆಗೆ ಕಾರಣವಾಗಿದ್ದು, ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಎಂ.ಶಿವರ ಗ್ರಾಮದಲ್ಲಿ ಘಟನೆ ನಡೆದಿದೆ. ಎಂ. ಶಿವರ ಗ್ರಾಮದ ಬಾರ್ ಮುಂದೆ ನಿಂತಿದ್ದಾಗ ಹೊಂಗೇಹಳ್ಳಿಯ ನವೀನ್ ಎಂಬಾತನಿಂದ ಈ ಕುಕೃತ್ಯ ನಡೆದಿದೆ. ಬಾರ್ ಮುಂದೆ ನಿಂತಿದ್ದ ನಂದೀಶ್, ಗಿರೀಶ್ ಮತ್ತಿರರ ಮೇಲೆ ಕಾರು ಚಲಾಯಿರುವ ಆರೋಪಿ ಹಂತಕನಾಗಿದ್ದಾನೆ. ಘಟನೆಯಲ್ಲಿ ನಂದೀಶ್ (48) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕುಡಿದ ಅಮಲಿನಲ್ಲಿ ಸಿಕ್ಕ ಸಿಕ್ಕವರಿಗೆ ನವೀವ್ ಬೈಯ್ತಿದ್ದ. ಈ ವೇಳೆ ಸುಮ್ಮನೆ ಊರಿಗೆ ಹೋಗು ಎಂದು ನಂದೀಶ್ ಮತ್ತು ಗೆಳೆಯರು ಬುದ್ಧಿ ಹೇಳಿದ್ದರು. ಈ ವೇಳೆ ಕಾರ್ ಏರಿ ವಾಪಾಸ್ ಹೋಗಿ, ಮತ್ತೆ ತಿರುಗಿ ಬಂದು ಪ್ರತೀಕಾರವಾಗಿ ಕಾರ್ ಹತ್ತಿಸಿ, ಒಬ್ಬರ ಸಾವಿಗೆ ಕಾರಣವಾಗಿದ್ದಾನೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಹಂತಕ ನವೀನನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಎಲೆಕ್ಟ್ರಾನಿಲ್ ಅಂಗಡಿಗೆ ಬೆಂಕಿ: 24 ಗಂಟೆಗಳಲ್ಲಿ ಕ್ಯಾಷಿಯರ್ ಅರೆಸ್ಟ್, ಉದ್ದೇಶ ಏನು ಗೊತ್ತಾ!?
ಕೋಲಾರ ನಗರದಲ್ಲಿ ಎಲೆಕ್ಟ್ರಾನಿಲ್ ಅಂಗಡಿಯಲ್ಲಿ ನಡೆದಿದ್ದ ಬೆಂಕಿ ಅವಘಡ ಪ್ರಕರಣದಲ್ಲಿ 24 ಗಂಟೆಗಳಲ್ಲಿ ಬೆಂಕಿ ಇಟ್ಟ ಆರೋಪಿಯನ್ನ ಪೋಲೀಸರು ಬಂಧಿಸಿದ್ದಾರೆ. ಕೋಲಾರ ನಗರದ ರೆಡ್ಡಿ ಎಲೆಕ್ಟ್ರಾನಿಕ್ಸ್ ಮತ್ತು ಹೋಂ ಅಪ್ಲೈಯನ್ಸಸ್ ನಲ್ಲಿ ಘಟನೆ ನಡೆದಿತ್ತು.
ಅಂಗಡಿಯಲ್ಲಿ ಕೆಲಸ ಮಾಡುವ ಸೇಲ್ಸ್ ಮನ್ ತೌಸಿಕ್ ಪಾಷಾ ಬಂಧನಕ್ಕೀಡಾದ ಆರೋಪಿ. ಖತರ್ನಾಕ್ ಸೇಲ್ಸ್ ಮನ್ ತೌಸಿಕ್ ಪಾಷಾ ಬೆಂಕಿ ಇಟ್ಟು ಕ್ಯಾಶ್ ಕೌಂಟರ್ ನಲ್ಲಿಟ್ಟಿದ್ದ ಹಣವನ್ನ ದೋಚಿದ್ದ! ಬಂಧಿತನಿಂದ 3.56 ಲಕ್ಷ ರೂ ನಗದು ಸೇರಿದಂತೆ ಬೆಂಕಿ ಇಡಲು ಬಳಸಿದ್ದ ವಸ್ತುಗಳನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಗಲ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
Laxmi News 24×7