ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಕುಂದೂರಿನಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದ ಮುಖ್ಯಮಂತ್ರಿಯನ್ನು ನೋಡಲು ಬಂದ ಬಾಲಕನ ತಲೆಗೆ ಪೊಲೀಸ್ ಸಿಬ್ಬಂದಿಯೊಬ್ಬರು ಟೋಪಿಯಿಂದ ಹೊಡೆದಿದ್ದರಿಂದ ಗಾಯವಾಗಿ ರಕ್ತ ಸುರಿದಿದೆ.
ನಿತಿನ್ ಎಂಬ ಬಾಲಕ ಗಾಯಗೊಂಡಿದ್ದಾನೆ.
ಕಾರ್ಯಕ್ರಮ ಇನ್ನೂ ಆರಂಭವಾಗಿರಲಿಲ್ಲ. ಮುಖ್ಯಮಂತ್ರಿ ಸಹಿತ ಗಣ್ಯರು ಸಭಾಂಗಣಕ್ಕೆ ಬಂದಿರಲಿಲ್ಲ. ಈ ಸಮಯದಲ್ಲಿ ವೇದಿಕೆಯ ಪಕ್ಕಕ್ಕೆ ಬಂದಿದ್ದ ಬಾಲಕನ ತಲೆಗೆ ಪೊಲೀಸರೊಬ್ಬರು ಟೋಪಿಯಿಂದ ಹೊಡೆದಾಗ ಗಾಯವಾಗಿ ರಕ್ತ ಬಂದಿದೆ.
‘ನಾನು ಹೊಡೆದಿಲ್ಲ. ಬಾಲಕನೇ ಇತರೊಡನೆ ಗಲಾಟೆ ಮಾಡಿಕೊಂಡಿದ್ದಾನೆ’ ಎಂದು ಆರಂಭದಲ್ಲಿ ಪೊಲೀಸ್ ಸಿಬ್ಬಂದಿ ಹೇಳಿದ್ದರು. ಆದರೆ, ಬಳಿಕ ‘ಇದು ಆಕಸ್ಮಿಕ ಘಟನೆ’ ಎಂದು ಸಮಜಾಯಿಷಿ ನೀಡಿದ್ದಾರೆ.
Laxmi News 24×7