ಗದಗ: ಲಕ್ಷಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ಡೆಂಘೆ ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ಶುಕ್ರವಾರ ಮೃತಪಟ್ಟಿದ್ದಾಳೆ.
ವೈಶಾಲಿ ಶಿವಪ್ಪ ಲಮಾಣಿ (16) ಮೃತೆ. ಈಕೆ ಮುಳಗುಂದದ ಮುರಾರ್ಜಿ ವಸತಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದಳು. ಅ.5ರಂದು ವಸತಿ ಶಾಲೆಯಲ್ಲಿಯೇ ಜ್ವರ ಕಾಣಿಸಿಕೊಂಡಿದ್ದರಿಂದ ಮನೆಗೆ ಆಗಮಿಸಿದ್ದಳು.
7ರಂದು ಲಕ್ಷೆಮೕಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾಳೆ. ಗುಣವಾಗದ್ದರಿಂದ ಅ.14ರಂದು ಧಾರವಾಡ ಎಸ್ಡಿಎಂಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಸಾವನ್ನಪ್ಪಿದ್ದಾಳೆ ಎಂದು ಪಾಲಕರು ತಿಳಿಸಿದ್ದಾರೆ.
Laxmi News 24×7