Breaking News

ಅನಾಥ ಸಹೋದರಿಯರಿಗೆ ಓದಿಸುವ ಭರವಸೆ ನೀಡಿದ ಸಚಿವ ಆರ್ ಅಶೋಕ್

Spread the love

ಹೊನ್ನಾಳಿ ತಾಲೂಕಿನ ಕುಂದೂರಿನಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ಅಶೋಕ್, ಸ್ಮಶಾನಕ್ಕೆ ಜಾಗ ನೀಡಿದರೆ 25-30 ಲಕ್ಷ ರೂ. ಕೊಡುತ್ತೇವೆ. ಒಂದು ಎಕರೆ ಭೂಮಿಗೆ 25-30 ಲಕ್ಷ ರೂ. ಕೊಡುತ್ತೇವೆ ಅಂತ ತಿಳಿಸಿದ್ದಾರೆ.

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಅಣಜಿ ಗ್ರಾಮದ ಇಬ್ಬರು ಸಹೋದರಿಯರು ತಂದೆ- ತಾಯಿ ಕಳೆದುಕೊಂಡು ಅನಾಥರಾಗಿದ್ದು, ಇಬ್ಬರು ಸಹೋದರಿಯರ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಕಂದಾಯ ಸಚಿವ ಆರ್.ಅಶೋಕ್ ತೆಗೆದುಕೊಂಡಿದ್ದಾರೆ. 10ನೇ ತರಗತಿಯವರೆಗೆ ಓದಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ವಿದ್ಯಾರ್ಥಿನಿಯರ ತಂದೆ- ತಾಯಿ ಇಬ್ಬರು ಅನಾರೋಗ್ಯದಿಂದ ಮೃತರಾಗಿದ್ದರು. ಮಲ್ಲಿಕಾ ಹಾಗೂ ನಯನಾ ಎಂಬ ಸಹೋದರಿಯರು ಹಿರೇಕೇರೂರು ತಾಲೂಕು ರಟ್ಟಿಹಳ್ಳಿ ಶಾಲೆಯಲ್ಲಿ ಸದ್ಯ ಓದುತ್ತಿದ್ದಾರೆ. ವಿದ್ಯಾರ್ಥಿನಿಯರು ಶಾಲಾ ಶುಲ್ಕ ಕಟ್ಟಲಾಗದ ಸ್ಥಿತಿಯಲ್ಲಿದ್ದಾರೆ. ಕುಂದೂರು ಗ್ರಾಮ ವಾಸ್ತವ್ಯ ಕಾರ್ಯಕ್ರಮ ವೇಳೆ ಸಹೋದರಿಯರಿಗೆ ಸಾಂತ್ವನ ಹೇಳಿದ ಸಚಿವ ಆರ್ ಅಶೋಕ್, 10ನೇ ತರಗತಿಯವರೆಗೆ ಓದಿಸುವುದಾಗಿ ಭರವಸೆ ನೀಡಿದ್ದಾರೆ.

ಹೊನ್ನಾಳಿ ತಾಲೂಕಿನ ಕುಂದೂರಿನಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ಅಶೋಕ್, ಸ್ಮಶಾನಕ್ಕೆ ಜಾಗ ನೀಡಿದರೆ 25-30 ಲಕ್ಷ ರೂ. ಕೊಡುತ್ತೇವೆ. ಒಂದು ಎಕರೆ ಭೂಮಿಗೆ 25-30 ಲಕ್ಷ ರೂ. ಕೊಡುತ್ತೇವೆ ಅಂತ ತಿಳಿಸಿದ್ದಾರೆ. ಸ್ಮಶಾನಕ್ಕಾಗಿ ಜಾಗ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಹೀಗಾಗಿ ಗ್ರಾಮದಲ್ಲಿ ಸ್ಮಶಾನಕ್ಕಾಗಿ ಜಾಗ ಹುಡುಕಲಾಗಿತ್ತು. ಆದರೆ ಸ್ಮಶಾನಕ್ಕೆ ಸೂಕ್ತ ಜಾಗ ಸಿಗದ ಹಿನ್ನೆಲೆ ಒಂದು ಎಕರೆ ಜಮೀನು ನೀಡುವಂತೆ ಅಶೋಕ್ ಮನವಿ ಮಾಡಿದ್ದಾರೆ. ಜೊತೆಗೆ ಸದ್ಯಕ್ಕೆ ತಾತ್ಕಾಲಿಕ ಜಾಗ ಮಾಡಿಕೊಡುವುದಾಗಿ ಭರವಸೆ ನೀಡಿದ ಅವರು, ಶವ ಹೂಳುವ ಬದಲು ಸುಡುವಂತೆ ಅಶೋಕ್ ಮನವಿ ಮಾಡಿಕೊಂಡಿದ್ದಾರೆ. ಇನ್ನು ಗ್ರಾಮ ವಾಸ್ತವ್ಯದ ವೇಳೆ 1,000ಕ್ಕೂ ಹೆಚ್ಚು ಮನವಿ ಸ್ವೀಕರಿಸಿದ್ದಾರೆ.

 


Spread the love

About Laxminews 24x7

Check Also

ಬೈಕ್ – ಹಾಲಿನ ವಾಹನ ನಡುವೆ ಡಿಕ್ಕಿ; ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

Spread the loveಶಿವಮೊಗ್ಗ: ಹಾಲಿನ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ