Breaking News

ಫೈರಿಂಗ್​​​​​ ಮಾಡಿ ಜೈಲು ಸೇರಿದ್ದ ಉದ್ಯಮಿ ಬಿಚ್ಚಿಟ್ಟ ಸತ್ಯ; ಚಾಕು ತೋರಿಸಿ ಹಲ್ಲೆ ಮಾಡಿದ್ದನಂತೆ ಸವಾರ

Spread the love

ಬೆಂಗಳೂರು: ರಾಮಯ್ಯ ಆಸ್ಪತ್ರೆ ಬಳಿ ಕಾರು ಮತ್ತು ಬೈಕ್ ಡಿಕ್ಕಿಯಾಗಿದ್ದಕ್ಕೆ ಜಗಳ ತೆಗೆದು, ಬೈಕ್ ಸವಾರನ ಮೇಲೆ ಫೈರಿಂಗ್​​ಗೆ ಯತ್ನಿಸಿದ್ದ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಂಡಿದೆ. ಬೈಕ್ ಸವಾರ ಅನಿಲ್ ಎಂಬಾತನ ಮೇಲೆ ಗಾಳಿಯಲ್ಲಿ ಗುಂಡು ಹಾರಿಸಿದ್ದ ಕೇಸ್ ಸಂಬಂಧ ಉದ್ಯಮಿ ರವೀಶ್ ಗೌಡನನ್ನ ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ.

ಮೇಲ್ನೋಟಕ್ಕೆ ಉದ್ಯಮಿಯದ್ದೇ ತಪ್ಪು ಅಂತ ತಿಳಿಯಲಾಗಿತ್ತು. ಆದ್ರೀಗ ಪ್ರಕರಣ ಬೈಕ್ ಸವಾರ ಅನಿಲ್ ಮೇಲೆ ತಿರುಗಿದೆ. ತನ್ನ ಒಡೆತನದ ಆರ್.ಜಿ.ಹೋಟೆಲ್​​ನಿಂದ ಬರುವಾಗ ಅನಿಲ್ ಮತ್ತು ಕೆಲವರು ಆ ಕಿರಿದಾದ ರಸ್ತೆಯಲ್ಲಿ ವ್ಹೀಲಿಂಗ್ ಮಾಡ್ತಿದ್ರಂತೆ. ಹೀಗಾಗಿ ಡಿಕ್ಕಿ ಹೊಡೆದು ಸಾಯ್ಬೇಡ್ರೋ ಎಂದು ರವೀಶ್ ಅವಾಜ್ ಹಾಕಿದ್ರಂತೆ. ಇದ್ರಿಂದ ಸಿಟ್ಟಾದ ಅನಿಲ್ ಮತ್ತು ಇನ್ನಿತರರು ಚಾಕು ತೋರಿಸಿ ರವೀಶ್ ಗೌಡ ಮೇಲೆ ಹಲ್ಲೆಗೆ ಮುಂದಾಗಿದ್ರಂತೆ.

ಈ ಹಿನ್ನೆಲೆ ಅವರನ್ನ ಬೆದರಿಸಲು, ಉದ್ಯಮಿ ಓಪನ್ ಫೈರ್ ಮಾಡಿದ್ರಂತೆ. ಈ ಹಿನ್ನೆಲೆ ರವೀಶ್ ಗೌಡ ಕೂಡ ಕೌಂಟರ್ ಕಂಪ್ಲೇಂಟ್ ದಾಖಲಿಸಿದ್ದಾರೆ. ಸದ್ಯ ಉದ್ಯಮಿ ದೂರಿನ ಅನ್ವಯ ಬೈಕ್ ಸವಾರ ಅನಿಲ್​​ನನ್ನ ಕರೆದು ವಿಚಾರಣೆ ನಡೆಸಲಾಗಿದೆ.


Spread the love

About Laxminews 24x7

Check Also

ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆ ನಿಮ್ಮ ನಂಬಿಕೆ ಉಳಿಸಿಕೊಂಡು, ತಾಲ್ಲೂಕಿನ ರೈತರು ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ

Spread the loveಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ