ಬೆಂಗಳೂರು: ಮಾಜಿ ಸಚಿವ ಬಿಜೆಪಿಯ ಶಾಸಕ ಕುಮಾರ್ ಬಂಗಾರಪ್ಪ ಅವರು ಶುಕ್ರವಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಕುಮಾರ್ ಬಂಗಾರಪ್ಪ ಅವರು ಆಗಮಿಸುವ ಮೊದಲು ಸಹೋದರ ಮಧು ಬಂಗಾರಪ್ಪ ಅವರೂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದರು.
ಪುತ್ರಿ ಮದುವೆಗೆ ಆಹ್ವಾನ
ತಾನು ಪುತ್ರಿಯ ಮದುವೆಗೆ ಆಮಂತ್ರಿಸಲು ಬಂದಿದ್ದು, ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ನಾನು ಕಾಂಗ್ರೆಸ್ ಸೇರುವುದೂ ಇಲ್ಲ. ಸಿದ್ದರಾಮಯ್ಯ ಇಂಥ ಆಹ್ವಾನವನ್ನೂ ನೀಡಿಲ್ಲ ಎಂದು ಕುಮಾರ್ ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ಕುಮಾರ್ ಬಂಗಾರಪ್ಪ ಬರುವ ಮೊದಲು ಮಧು ಬಂಗಾರಪ್ಪ ಅವರು ಸಿದ್ದರಾಮಯ್ಯರನ್ನು ಭೇಟಿ ವಿಜಯದಶಮಿ ಶುಭಾಶಯ ಕೋರಿದ್ದರು. ಆಗ ಕುಮಾರ್ ಬಂಗಾರಪ್ಪ ಆಗಮಿಸಿದ್ದರಿಂದ ಅಲ್ಲಿಂದ ನಿರ್ಗಮಿಸಿದರು.