ಕರೋನಾ ಸೇನಾನಿಗಳಿಗೆ ಹಾಗೂ ಕೋವಿಡ್ 19 ಲಸಿಕಾ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ ನಗರದ ಶ್ರೀ ಎಸ್ ಜಿ ಬಾಳೆಕುಂದ್ರಿ ಇಂಜಿನಿಯರಿಂಗ ಕಾಲೇಜು ಸಭಾಗೃಹ ಬೆಳಗಾವಿಯಲ್ಲಿ ಜರುಗಿತು.
ಮಾನ್ಯ ಪ್ರಧಾನಿ ಶ್ರೀ ಮೋದಿಜಿ ಹಾಗೂ ಆರೋಗ್ಯ ಇಲಾಖೆಯ ಸತತ ಪ್ರಯತ್ನದಿಂದ ಭಾರತ ದೇಶಾದ್ಯಂತ 100 ಕೋಟಿ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ 30,18,570 ಜನರಿಗೆ ಕೋವಿಡ್ 19 ಲಸಿಕೆ ನೀಡಿದ ಪ್ರಯುಕ್ತ ಈ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು,
ಈ ಸಂಧರ್ಭದಲ್ಲಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ನಾಗನೂರಮಠ, ಜಿಲ್ಲಾಧಿಕಾರಿ ಶ್ರೀ ಎಮ್ ಜಿ ಹಿರೇಮಠ, ಜಿಲ್ಲಾ ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.
Laxmi News 24×7