Breaking News

‘ಸಲಗ’ ಚಿತ್ರದ ಫಸ್ಟ್​ ಹಾಫ್​ ರಿಪೋರ್ಟ್​

Spread the love

ಭಾರಿ ನಿರೀಕ್ಷೆ ಮೂಡಿಸಿದ್ದ ‘ಸಲಗ’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ದುನಿಯಾ ವಿಜಯ್​ ಅವರ ನಟನೆ ಮತ್ತು ನಿರ್ದೇಶನ ಹೇಗಿದೆ? ಮಧ್ಯಂತರದವರೆಗೆ ಈ ಸಿನಿಮಾದಲ್ಲಿ ಏನುಂಟು ಏನಿಲ್ಲ ಅಂತ ತಿಳಿಯಲು ಈ ರಿಪೋರ್ಟ್​ ಓದಿ.

ರಾಜ್ಯಾದ್ಯಂತ ‘ಸಲಗ’ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಿದೆ. ನಟ ದುನಿಯಾ ವಿಜಯ್​ ಅವರು ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವುದರಿಂದ ಅಭಿಮಾನಿಗಳು ಈ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದು ಸಹಜ. ಚಿತ್ರಮಂದಿರದ ಮುಂದೆ ಅಪ್ಪಟ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಕಟೌಟ್​ಗಳಿಗೆ ಹಾರ ಹಾಕಿ, ಅಭಿಷೇಕ ಮಾಡಿ ‘ಸಲಗ’ಕ್ಕೆ ಅದ್ದೂರಿ ಸ್ವಾಗತ ಕೋರಲಾಗಿದೆ. ಈಗಾಗಲೇ ಬಹುತೇಕ ಕಡೆಗಳಲ್ಲಿ ಫಸ್ಟ್​ ಶೋ ಪ್ರಾರಂಭ ಆಗಿದೆ. ಮಧ್ಯಂತರದವರೆಗೆ ಸಿನಿಮಾ ಹೇಗಿದೆ ಎಂಬುದರ ರಿಪೋರ್ಟ್​ ಇಲ್ಲಿದೆ.

  • ‘ಸಲಗ’ ಒಂದು ಪಕ್ಕಾ ಮಾಸ್ ಎಂಟರ್​ಟೈನರ್ ಸಿನಿಮಾ. ಟ್ರೈಲರ್​ನಲ್ಲಿ ನೋಡಿರುವುದಕ್ಕಿಂತ ಮತ್ತೂ ಹೆಚ್ಚಾಗಿ ಚಿತ್ರದ ಮೊದಲಾರ್ಧ ಮೂಡಿಬಂದಿದೆ.
  • ಅಂಡರ್​ವರ್ಲ್ಡ್ ಜಗತ್ತನ್ನು ತೀರ ನೇರವಾಗಿ ತೋರಿಸುವ ಪ್ರಯತ್ನವನ್ನು ನಿರ್ದೇಶಕ ದುನಿಯಾ ವಿಜಯ್ ಮಾಡಿದ್ದಾರೆ. ಅದಕ್ಕೆ ಸರಿಹೊಂದುವಂತಹ ಡೈಲಾಗ್ಸ್ ಹಾಗೂ ದೃಶ್ಯಗಳಿವೆ. ಇದು ಫ್ಯಾಮಿಲಿ ಆಡಿಯನ್ಸ್​ಗಿಂತ ಮಾಸ್ ಆಡಿಯನ್ಸ್​ಗೆ ಹೆಚ್ಚು ಕನೆಕ್ಟ್ ಆಗುವ ರೀತಿಯಲ್ಲಿದೆ.
  • ‘ಸಲಗ’ದಲ್ಲಿ ಭರ್ಜರಿ ಆಕ್ಷನ್ ದೃಶ್ಯಗಳನ್ನು ಅಭಿಮಾನಿಗಳು ನಿರೀಕ್ಷಿಸಿದ್ದರು. ಅದಕ್ಕೆ ತಕ್ಕಂತೆ ಭರ್ಜರಿ 3 ಆಕ್ಷನ್ ದೃಶ್ಯಗಳು ಚಿತ್ರದ ಮೊದಲಾರ್ಧದಲ್ಲಿದೆ.
  • ಚಿತ್ರದ ರಿಲೀಸ್​ಗೂ ಮೊದಲೇ ಸಿನಿಮಾದ ಹಾಡುಗಳು ಸಾಕಷ್ಟು ಹೈಪ್ ಸೃಷ್ಟಿಸಿದ್ದವು. ಅದರಲ್ಲಿ ಯಾವ ಹಾಡು ಮೊದಲಾರ್ಧಲ್ಲಿದೆ ಎಂಬ ಕುತೂಹಲವಿತ್ತು. ಅದಕ್ಕೆ ಮೊದಲಾರ್ಧದಲ್ಲಿ ಉತ್ತರ ಸಿಕ್ಕಿದೆ.
  • ದೊಡ್ಡ ಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡಿದ್ದ ‘ಸೂರಿ ಅಣ್ಣ’, ಸಲಗದ ಟೈಟಲ್ ಟ್ರ್ಯಾಕ್ ಹಾಗೂ ಸಂಜನಾ, ವಿಜಯ್ ಕಾಣಿಸಿಕೊಂಡಿರುವ ‘ಮಳೆಯೇ ಮಳೆಯೇ’ ಹಾಡು ಚಿತ್ರದ ಫರ್ಸ್ಟ್ ಹಾಫ್​ನಲ್ಲಿದೆ.
  • ಚಿತ್ರ ಮತ್ತಷ್ಟು ನಿರೀಕ್ಷೆ ಹುಟ್ಟುಹಾಕಲು ಕಾರಣವಾಗಿದ್ದ ಡಾಲಿ ಧನಂಜಯ್ ಅವರ ಖಡಕ್ ಪೊಲೀಸ್ ಪಾತ್ರವೂ ಮೊದಲಾರ್ಧಲ್ಲಿದ್ದು, ವಿಜಯ್ ಹಾಗೂ ಧನಂಜಯ್ ಮುಖಾಮುಖಿಯಾಗುವ ದೃಶ್ಯಗಳಿವೆ.
  • ನಾಯಕಿ ಸಂಜನಾ ಆನಂದ್ ಮೊದಲಾರ್ಧದಲ್ಲಿ ಕೆಲವೇ ಕೆಲವು ದೃಶ್ಯಗಳಲ್ಲಿ ಬಂದುಹೋಗುತ್ತಾರೆ. ಅವರ ಫ್ಲಾಶ್ ಬ್ಯಾಕ್ ಕಥೆಗೆ ಪ್ರೇಕ್ಷಕರು ಸೆಕೆಂಡ್ ಹಾಫ್​ಗೆ ಕಾಯಲೇಬೇಕು.
  • ಮಾಸ್ತಿ ಅವರ ಸಂಭಾಷಣೆಗಳು ಮಾಸ್ ದೃಶ್ಯಗಳಲ್ಲಿ ಖಡಕ್ ಆಗಿ ಮೂಡಿಬಂದಿವೆ. ಹಾಗೆಯೇ ಹಾಸ್ಯದ ದೃಶ್ಯಗಳಲ್ಲಿ ಡೈಲಾಗ್ಸ್ ನಗು ಮೂಡಿಸಲು ಶಕ್ತವಾಗಿವೆ.

Spread the love

About Laxminews 24x7

Check Also

ಮಠ’ ಸಿನಿಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ

Spread the love ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ, ನಟ ಗುರುಪ್ರಸಾದ್ (52) ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಮಾದನಾಯಕನಹಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ