Breaking News

ಕಂದಾಯ ನಿರೀಕ್ಷಕಿ ಆತ್ಮಹತ್ಯೆ! ಮಹತ್ತರ ಕನಸು ಕಂಡಿದ್ದವಳ ಬಾಳಲ್ಲಿ ದುರಂತ

Spread the love

ಸಿರಗುಪ್ಪ(ಬಳ್ಳಾರಿ): ಆಕೆಯ ವಯಸ್ಸಿನ್ನೂ 28. ಎರಡು ವರ್ಷದ ಹಿಂದೆ ದಂತ ವೈದ್ಯರೊಬ್ಬರ ಜತೆ ಮದುವೆ ಆಗಿದ್ದಳು. ಎಫ್​ಡಿಎ ಪರೀಕ್ಷೆಯಲ್ಲಿ ಪಾಸ್ ಆಗಿ ಕಂದಾಯ ನಿರೀಕ್ಷಕ ಹುದ್ದೆಯೂ ಸಿಕ್ಕಿತ್ತು. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದೆ ಎನ್ನುವಷ್ಟರಲ್ಲಿ ದುರಂತ ಅಂತ್ಯ ಕಂಡಿದ್ದು, ಸಾವಿನ ಸುತ್ತ ಅನುಮಾನ ಮೂಡಿದೆ.

ಹೌದು, ಕೊಪ್ಪಳದ ನಗರಸಭೆಯಲ್ಲಿ ಕಂದಾಯ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದ ಚೈತ್ರಾ ಇಂದು(ಮಂಗಳವಾರ) ಬೆಳಗ್ಗೆ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಸಿರಗುಪ್ಪದ ಸದಾಶಿವ ನಗರದ ನಿವಾಸಿ ಶಿವಶಂಕರಗೌಡರ ಪುತ್ರಿಯಾದ ಚೈತ್ರಾ, ಎರಡು ವರ್ಷಗಳ ಹಿಂದೆ ದಂತವೈದ್ಯರನ್ನು ಮದುವೆಯಾಗಿದ್ದರು. ಇತ್ತೀಚೆಗೆ ತವರು ಮನೆಗೆ ಬಂದಿದ್ದರು. ಎಂದಿನಂತೆ ಸೋಮವಾರ ಊಟದ ನಂತರ ಮಲಗಿದ್ದು, ಮಂಗಳವಾರ ಬೆಳಗ್ಗೆ 10 ಘಂಟೆಯಾದರೂ ಇನ್ನೂ ಎದ್ದಿಲ್ಲವೆಂದು ಕಿಟಕಿಯಿಂದ ನೋಡಿದಾಗ ಆತ್ಮಹತೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಕೆಎಎಸ್ ಅಥವಾ ಐಎಎಸ್ ಪಾಸ್​ ಮಾಡುವ ಮಹತ್ತರ ಗುರಿ ಇಟ್ಟುಕೊಂಡಿದ್ದ ಚೈತ್ರಾಗೆ ಕಂದಾಯ ನಿರೀಕ್ಷಕರ ಹುದ್ದೆ ಸಿಕ್ಕಿದ್ದು ತೃಪ್ತಿ ಇರಲಿಲ್ಲವಂತೆ. ಇದೇ ವಿಚಾರಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ನಗರದ ಪೊಲೀಸ್ ಠಾಣೆಯಲ್ಲಿ ಮೃತಳ ತಂದೆ ದೂರಿನಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಫಾರೆಸ್ಟ್ ಗಾರ್ಡ್ ನಿಗೂಢವಾಗಿ ನಾಪತ್ತೆ, 6 ದಿನ ಕಳೆದರೂ ಸಿಗದ ಸುಳಿವು

Spread the loveಚಿಕ್ಕಮಗಳೂರು, ಜುಲೈ 02: ಜಿಲ್ಲೆಯ ಕಡೂರು (Kadur) ತಾಲೂಕಿನ ನೀಲಗಿರಿ ಪ್ಲಾಂಟೇಶನ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಫಾರೆಸ್ಟ್ ಗಾರ್ಡ್ (forest guard) ನಿಗೂಢವಾಗಿ ನಾಪತ್ತೆಯಾಗಿರುವಂತಹ ಘಟನೆ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ