Breaking News

ಮಳೆಗೆ ಬಿದ್ಧ ಮನೆ- ಸ್ವಲ್ಪದರಲ್ಲೇ ಬದುಕುಳಿದ 8 ಜೀವಗಳು.

Spread the love

ಬೆಳಗಾವಿ: ನಿನ್ನೆ ತಡರಾತ್ರಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮನೆಗಗಳಿಗೆ ನೀರು ನುಗ್ಗಿದ್ದು, ಬಾಳು ಕಡೊಲಕರ ಎಂಬವರ ಮನೆ ಕುಸಿದಿರುವ ಘಟನೆ ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದಲ್ಲಿ ನಡೆದಿದೆ.

ಮನೆಗೆ ಬಂದಿದ್ದ ಮಳೆನೀರನ್ನು ಹೊರಹಾಕಿ ಜಾರಿದ ಕುಟುಂಬದ ಸದಸ್ಯರು ಮತ್ತೆ ನಿದ್ರೆಗೆ ಜಾರಿದ ಸಂದರ್ಭದಲ್ಲಿ ಮನೆ ಛಾವಣಿ ಕುಸಿದಿದೆ. ಶಬ್ದ ಕೇಳಿ 8 ಸದಸ್ಯರು ಮನೆಯಿಂದ ಹೊರಬಂದಿದ್ದಾರೆ. ಮನೆ ಮಾಲೀಕ ಬಸವಣ್ಣಿ ಕಡೊಲಕರ್ ಸಮಯ ಪ್ರಜ್ಞೆಯಿಂದ 8 ಜೀವಗಳು ಬದುಕುಳಿದಿವೆ. ಮನೆ ಅವಶೇಷದಡಿ ಮನೆ ವಸ್ತುಗಳು ಸಿಲುಕಿದ್ದು, ಬೀದಿಯಲ್ಲಿ ಜೀವನ
ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಂಡ್ಯದಲ್ಲಿ ಭಾರೀ ಮಳೆಗೆ ಕುಂದೂರು ಕಾಲುವೆ ಸೇತುವೆ ಕುಸಿದಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ‌ ತಾಲೂಕಿನ ಕುಂದೂರಿನಲ್ಲಿ ತಡರಾತ್ರಿ ಹೇಮಾವತಿ ಎಡದಂಡೆ ನಾಲೆಯ ಸೇತುವೆ ಕುಸಿದಿದ್ದು, ಸೇತುವೆ ಕುಸಿತಕ್ಕೆ ಗ್ರಾಮಸ್ಥರ ಸಂಚಾರ ಬಂದ್ ಮಾಡಲಾಗಿದೆ. ಈ ಹಿಂದೆಯೆ ಶಿಥಿಲಗೊಂಡಿದ್ದ ಸೇತುವೆಯನ್ನು ದುರಸ್ಥಿ ಮಾಡುವಂತೆ ನೀರಾವರಿ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದರು.


Spread the love

About Laxminews 24x7

Check Also

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

Spread the love ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ