ಮುಂಬಯಿ : ‘ಅಭಿಮಾನಿಗಳು ಮತ್ತು ಹಿತೈಷಿಗಳ ಪ್ರೀತಿಯಿಂದಾಗಿ ನಾನು ಉತ್ಸಾಹದಿಂದ ತೇಲಾಡುತ್ತಿದ್ದೇನೆ’ ಎಂದು 79 ನೇ ಜನ್ಮದಿನಾಚರಣೆಯ ಸಂಭ್ರಮದಂದು ಬಾಲಿವುಡ್ ಮೇರು ನಟ ಅಮಿತಾಬ್ ಬಚ್ಚನ್ ಹೇಳಿದ್ದಾರೆ.
ಅಮಿತಾಬ್ ಅವರ ಮುಂಬಯಿಯ ನಿವಾಸದ ಎದುರು ಸೋಮವಾರ ನೂರಾರು ಅಭಿಮಾನಿಗಳು ಆಗಮಿಸಿ ಸಂಭ್ರಮಿಸಿದರು. ಅಮಿತಾಬ್ ಅವರು ಅಭಿಮಾನಿಗತ್ತ ಕೈ ಬೀಸಿ ಪ್ರೀತಿ ವ್ಯಕ್ತಪಡಿಸಿದರು.
ಜನಪ್ರಿಯ ಕಾರ್ಯಕ್ರಮವಾಗಿರುವ ‘ಕೌನ್ ಬನೇಗಾ ಕ್ರೋರ್ ಪತಿ’ ಕಾರ್ಯಕ್ರಮದ ಸೆಟ್ನಲ್ಲಿ ಅಮಿತಾಬ್ ಅವರಿಗೆ ಕೆಂಪು ಹಾಸಿನ ವಿಶೇಷ ಗೌರವ ನೀಡಿ, ಬರ್ತ್ ಡೇ ವಿಶೇಷ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತಿದೆ.
2000 ರಲ್ಲಿ ಅಮಿತಾಬ್ ಕೌನ್ ಬನೇಗಾ ಕ್ರೋರ್ ಪತಿ ಕಾರ್ಯಕ್ರಮದ ನಿರೂಪಕನಾಗಿದ್ದರು ಪ್ರಸಕ್ತ 13 ನೇ ಸರಣಿಯನ್ನು ನಡೆಸಿಕೊಡುತ್ತಿದ್ದಾರೆ.
Laxmi News 24×7