Breaking News

ಬಿಬಿಎಂಪಿ ಯಡವಟ್ಟಿಗೆ 9 ವರ್ಷದ ಬಾಲಕ ಬಲಿ

Spread the love

ಬೆಂಗಳೂರು: ನಿರ್ವಹಣೆ ಇಲ್ಲದ ಬಿಬಿಎಂಪಿ ಪಾರ್ಕ್‌ನ ಹೊಂಡದಲ್ಲಿ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಬೆಂಗಳೂರು ಟಿ.ದಾಸರಹಳ್ಳಿಯ ಮಲ್ಲಸಂದ್ರದ 13 ನೇ ವಾರ್ಡ್ನ ಕೆಂಪೇಗೌಡ ಪಾರ್ಕ್‌ನಲ್ಲಿ ನಡೆದಿದೆ.

ಮೃತ ಬಾಲಕನನ್ನು 9 ವರ್ಷದ ಪ್ರತಾಪ್ ಎಂದು ಗುರುತಿಸಲಾಗಿದೆ. ಈತ ಗಾರ್ಮೆಂಟ್ಸ್ ನೌಕರ ರುದ್ರಮುನಿ ಹಾಗೂ ತಾಯಿ ಕಾಂತಮಣಿ ದಂಪತಿಯ ಪುತ್ರ. ಮಳೆಯಿಂದಾಗಿ ಪಾರ್ಕ್‌ನ ತಗ್ಗು ಪ್ರದೇಶದಲ್ಲಿ ನಿಂತಿದ್ದ ನೀರಿನಿಂದ ಅವಘಡ ಸಂಭವಿಸಿದ್ದು, ಆಟವಾಡುವ ವೇಳೆ ನೀರಿನಲ್ಲಿ ಮುಳುಗಿ ಬಾಲಕ ಸಾವನ್ನಪ್ಪಿದ್ದಾನೆ. ಪಾರ್ಕ್ ನಿರ್ವಹಣೆ ಸರಿಯಿಲ್ಲ ಎಂದು, ಭದ್ರತಾ ಸಿಬ್ಬಂದಿ ಇಲ್ಲದಿರುವುದೇ ಅವಘಡಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

 


Spread the love

About Laxminews 24x7

Check Also

ವೋಟ್ ಚೋರಿ ಹೋರಾಟ ಯಶಸ್ವಿ ಆಗಿದ್ದು, ದೇಶಕ್ಕೆ ಒಂದು ಸಂದೇಶ ಹೋಗಿದೆ: ಡಿ.ಕೆ. ಶಿವಕುಮಾರ್

Spread the loveವೋಟ್ ಚೋರಿ ಹೋರಾಟ ಯಶಸ್ವಿ ಆಗಿದ್ದು, ದೇಶಕ್ಕೆ ಒಂದು ಸಂದೇಶ ಹೋಗಿದೆ: ಡಿ.ಕೆ. ಶಿವಕುಮಾರ್ ಬೆಳಗಾವಿ: ಪಕ್ಷದ ಸಂಸದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ