Breaking News

ಕಲಬುರಗಿ: 340 ಕೆ.ಜಿ ಗಾಂಜಾ ವಶ; ಮೂವರ ಬಂಧನ

Spread the love

ಕಲಬುರಗಿ: ಆಂಧ್ರಪ್ರದೇಶದ ಧರ್ಮಾಚಲಂನಿಂದ ನಗರ ತಂದ 340 ಕೆಜಿ ತೂಕದ ಕಾಂಜಾವನ್ನು ನಗರ ಪೊಲೀಸರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ. ಮೂವರು ಆರೋಪಿಗಳನ್ನೂ ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ನಗರ ಪೊಲೀಸ್‌ ಆಯುಕ್ತಾಲಯದ ಸೈಬರ್‌ ಅಪರಾಧ ಮತ್ತು ಮಾದಕದ್ರವ್ಯ ನಿಗ್ರಹ ಠಾಣೆ (ಸಿಇಎನ್) ಪೊಲೀಸರು, ವಾಹನ ಜಪ್ತಿ ಮಾಡಿದರು. ಮಹಾರಾಷ್ಟ್ರದ ಲಾತೂರ ಮೂಲದ ಅಕ್ರಮ ಇನಾಮದಾರ, ಸುಮೇರ್ ಇನಾಮದಾರ್ ಹಾಗೂ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಮೋಹನ್ ಮೇತ್ರೆ ಎಂಬುವರನ್ನು ಬಂಧಿಸಿದರು.‌

ಸರಕು ಸಾಗಣೆ ವಾಹನದಲ್ಲಿ ಒಂದು ಭಾಗದಲ್ಲಿ ಕಬ್ಬಿಣದ ಪ್ಲೇಟ್ ಹಾಕಿ ವೆಲ್ಡಿಂಗ್ ಮಾಡಿ, ಗಾಂಜಾ ತುಂಬಿದ ಬಾಕ್ಸ್‌ಗಳನ್ನು ಅದರ ಸಂದಿಯಲ್ಲಿ ಇಟ್ಟು ಸಾಗಣೆ ಮಾಡುತ್ತಿದ್ದರು. ಮೇಲ್ನೋಟಕ್ಕೆ ಇದು ಕಬ್ಬಿಣ ಸಾಗಣೆ ಮಾಡುವ ರೀತಿಯೇ ಕಾಣಿಸುತ್ತಿತ್ತು. ತಾವರಗೇರಾ ಕ್ರಾಸ್‌ ಹತ್ತಿರ ವಾಹನ ತಪಾಸಣೆ ಮಾಡುವಾಗ, ಆರೋಪಿಗಳು ತಮ್ಮ ವಾಹನ ನಿಲ್ಲಿಸದೇ ಹೋದರು. ಇದರಿಂದ ಸಂಶಯಗೊಂಡ ಪೊಲೀಸರು ವಾಹನವನ್ನು ಬೆನ್ನತ್ತಿ ಬೇಲೂರು ಕ್ರಾಸ್ ಹತ್ತಿರ ತಡೆದರು. ಪರಾರಿಯಾಗಲು ಯತ್ನಿಸಿದ ಮೂವರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು‌.

ಇನ್‍ಸ್ಪೆಕ್ಟರ್ ಬಸವರಾಜ ತೇಲಿ, ಪಿಎಸ್‍ಐ ವಾಹಿದ್ ಹುಸೇನ್ ಕೊತ್ವಾಲ್, ಎಎಸ್‍ಐಗಳಾದ ರವಿಕುಮಾರ, ದೇವೇಂದ್ರ, ಸಿಬ್ಬಂದಿ ಶಿವಲಿಂಗ, ಸುನೀಲ್‍ಕುಮಾರ, ಚಂದ್ರಕಾಂತ, ಹುಸೇನ್‍ಬಾಷಾ ಈ ದಾಳಿಯಲ್ಲಿ ಪಾಲ್ಗೊಂಡವರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ