ವಿಜಯಪುರ: ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಹೆಸರು ಸ್ಮರಿಸದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ದಲಿತ ಮುಖಂಡ ಅಡಿವೆಪ್ಪ ಸಾಲಗಲ್ ತರಾಟೆಗೆ ತೆಗೆದುಕೊಂಡ ಘಟನೆ ನಗರದಲ್ಲಿ ಶನಿವಾರ ನಡೆಯಿತು.
ಅಕ್ಕನ ವಿವಿಯಲ್ಲಿ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಚಿವೆ ನೀಡಿದ ಸಂದೇಶದಲ್ಲಿ ಡಾ. ಅಂಬೇಡ್ಕರ್ ಅವರನ್ನು ಸ್ಮರಿಸಲಿಲ್ಲ. ಇದರಿಂದಾಗಿ ಕುಪಿತಗೊಂಡ ಅಡಿವೆಪ್ಪ ಸಾಲಗಲ್ ಸಚಿವೆ ಭಾಷಣ ಮುಗಿಸಿ ಸ್ಥಳಕ್ಕೆ ಬಂದು ಕುಳಿತುಕೊಳ್ಳುತ್ತಿದ್ದಂತೆಯೇ ತೀವ್ರ ತರಾಟೆಗೆ ತೆಗೆದುಕೊಂಡರು. ಇದರಿಂದ ಕ್ಷಮೆ ಕೋರಿದ ಸಚಿವೆ ಜೊಲ್ಲೆ ಮತ್ತೆ ವೇದಿಕೆಯನ್ನೇರಿ, ಡಾ. ಅಂಬೇಡ್ಕರ್ ಹೆಸರು ಸ್ಮರಿಸದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಪ್ರತಿ ಭಾಷಣದಲ್ಲಿ ಡಾ. ಅಂಬೇಡ್ಕರ್ ಅವರನ್ನು ಸ್ಮರಿಸುವ ನಾನು ಈ ಬಾರಿ ಮಾತ್ರ ಅಚಾನಕ್ ಆಗಿ ಸ್ಮರಿಸಲಿಲ್ಲ.
ನನ್ನಿಂದ ತಪ್ಪಾಗಿದೆ. ನನಗೆ ರಾಜಕೀಯದಲ್ಲಿ ಈ ಸ್ಥಾನಮಾನ ಸಿಗಲಿಕ್ಕೆ ಡಾ. ಅಂಬೇಡ್ಕರ್ ಅವರೇ ಕಾರಣರು. ನನ್ನ ಅಚಾತುರ್ಯದಿಂದ ಅವರ ಹೆಸರನ್ನು ಬಳಸದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸುತ್ತೇನೆ. ಇದನ್ನು ಪ್ರಶ್ನಿಸಿದ ಸಹೋದರರು ಈ ವಿಷಯವನ್ನು ಇಲ್ಲಿಗೆ ಮುಗಿಸಬೇಕು. ತನ್ನ ಸ್ವಂತ ತಂಗಿಯನ್ನು ಮನ್ನಿಸಬೇಕೆಂದು ಸಾರ್ವಜನಿಕವಾಗಿ ತಿಳಿಸಿದಾಗ, ವಿವಾದ ತಣ್ಣಗಾಯಿತು.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??