Breaking News

ಗಾಂಜಾ ಸೇದಲು ಬೆಂಕಿ ಪೊಟ್ಟಣ ಕೊಡದೇ ಇದ್ದಿದ್ದಕ್ಕೆ ಕುರಿಗಾಹಿಗಳ ಮೇಲೆ ಹಲ್ಲೆ

Spread the love

ತುಮಕೂರು: ಗಾಂಜಾ ಸೇದಲು ಬೆಂಕಿ ಪೊಟ್ಟಣ ಕೊಡದೇ ಇದ್ದಿದ್ದಕ್ಕೆ ಕುರಿಗಾಹಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿ‌ನ ಹುಚ್ಚನಹಟ್ಟಿ ಬಳಿ ನಡೆದಿದೆ. 6 ಜನರ ಯುವಕರ ಗುಂಪೊಂದು ಕುರಿಗಾಹಿಗಳನ್ನು ನೂಕಿದ್ದು, ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ತಿಪಟೂರು ನಗರದ ಗಗನ್, ರಾಕೇಶ್, ಅರ್ಜುನ್, ಸ್ವರೂಪ್ ಸೆರಿದಂತೆ ಒಟ್ಟು 6 ಜನ ಸೇರಿ ಕುರಿಗಾಹಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.

ಕುರಿ ಮೇಯಿಸಲು ಬಂದಿದ್ದವರ ಮೇಲೆ ರಾಕ್ಷಸನಂತೆ ಎರಗಿದ ಗಗನ್, ಹಲ್ಲೆ ಮಾಡಿದ್ದಾನೆ. ಗಗನ್ ಈ ಹಿಂದೆ 9 ತಿಂಗಳುಗಳ ಕಾಲ ಜೈಲಿನಲ್ಲಿದ್ದ ಎನ್ನಲಾಗಿದೆ. ಸದ್ಯ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತಿಪಟೂರು ಗ್ರಾಮಾಂತರ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತಿಬ್ಬರು ಪುಂಡರು ಪರಾರಿಯಾಗಿದ್ದಾರೆ.


Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ