Breaking News
Home / ರಾಜಕೀಯ / ಯುಪಿಎ ಅವಧಿಯಲ್ಲೇ ಹಗರಣಗಳು ಹೆಚ್ಚು : ಸಚಿವ ಪ್ರಹ್ಲಾದ ಜೋಶಿ

ಯುಪಿಎ ಅವಧಿಯಲ್ಲೇ ಹಗರಣಗಳು ಹೆಚ್ಚು : ಸಚಿವ ಪ್ರಹ್ಲಾದ ಜೋಶಿ

Spread the love

ಹುಬ್ಬಳ್ಳಿ: ದೇಶದ ಇತಿಹಾಸದಲ್ಲಿ ಅತ್ಯಂತ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದೇ 10 ವರ್ಷಗಳ ಯುಪಿಎ ಸರಕಾರದ ಅವಧಿಯಲ್ಲಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎ ಆಡಳಿತದಲ್ಲಿ 1 ಲಕ್ಷ 76 ಸಾವಿರ ಕೋಟಿ ರೂ. 2ಜಿ, 2 ಲಕ್ಷ 84 ಸಾವಿರ ಕೋಟಿ ರೂ. ಕಲ್ಲಿದ್ದಲು, ಸ್ಪೆಕ್ಟ್ರಂ, ಕ್ರೀಡೆ ಸೇರಿದಂತೆ ಪ್ರತಿಯೊಂದರಲ್ಲೂ ಸಹಿತ ಭ್ರಷ್ಟಾಚಾರ-ಹಗರಣ ಮಾಡಿದರು. ಈಗ ಪ್ರಧಾನಿ ಮೋದಿ ನೇತೃತ್ವದ ಸರಕಾರ ಎಲ್ಲದರಲ್ಲೂ ಅತ್ಯಂತ ಪಾರದರ್ಶಕ ವ್ಯವಸ್ಥೆ ಜಾರಿಗೊಳಿಸಿದೆ. ದೇಶದಲ್ಲಿ 58-59 ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್‌ ನಾಯಕರು ಯಾವ ರೀತಿ ಲೂಟಿ ಮಾಡಿದರು. ದೇಶದ ಸ್ಥಿತಿ ಯಾವ ಮಟ್ಟಕ್ಕೆ ತಂದಿದ್ದರು. ರಕ್ಷಣಾ ವ್ಯವಸ್ಥೆ ಹೇಗಿತ್ತು. ತುಷ್ಟೀಕರಣದ ರಾಜಕಾರಣ ಮಾಡಿದರೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಅವರು ಬೆಲೆ ಏರಿಕೆ ವಿಚಾರವಾಗಿ 50 ವರ್ಷಗಳ ನಂತರ ಪ್ರತಿಭಟಿಸುವುದನ್ನು ಕಲಿತಿದ್ದಾರೆ. ಆ ಮೂಲಕ ವಿಪಕ್ಷದಲ್ಲಿದ್ದೇವೆಂಬ ಬಗ್ಗೆ ನೆನಪಾಗುತ್ತಿದೆ. ವಿಪಕ್ಷದವರಾಗಿ ಅವರು ಎಚ್ಚರಿಸಲಿ, ಅವರ ಭಾವನೆಗಳನ್ನು ಗಮನಿಸುತ್ತೇವೆ ಎಂದರು.

ಬಿಜೆಪಿಯಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಟಿಕೆಟ್‌ ಹಂಚಿಕೆ ಆಗಲ್ಲ. ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಪ್ರೊಜೆಕ್ಟ್ ಮಾಡಿರಲಾಗಿರುತ್ತದೆ. ಅದರಂತೆ ಯಾವುದೇ ರಾಜ್ಯದಲ್ಲಿ ಪಕ್ಷ ಒಬ್ಬ ವ್ಯಕ್ತಿ ಆಧಾರ ಮೇಲೆ ಟಿಕೆಟ್‌ ಹಂಚಿಕೆ ಮಾಡಲ್ಲ. ಅದು ಯಡಿಯೂರಪ್ಪ ಆಗಿರಲಿ, ಬೇರೆ ಯಾರಾದರೂ ಆಗಿರಲಿ ಎಂದರು.

ಜೆಡಿಎಸ್‌ನ ಪ್ರಜ್ವಲ ರೇವಣ್ಣ ಅವರು ಹುಲಿ ಎದ್ದರೆ ಆರೆಸ್ಸೆಸ್‌ ವಾಪಸ್‌ ದೆಹಲಿಗೆ ಓಡುತ್ತೆ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹುಲಿ ಯಾರು ಅನ್ನೋದು ಮೊದಲು ಸ್ಪಷ್ಟವಾಗಲಿ. ಆಗ ಮಾತ್ರ ಅದಕ್ಕೆ ಉತ್ತರ ಕೊಡಲು ಸಾಧ್ಯ ಎಂದರು.

ತುಕಡೆ ತುಕಡೆ ಮಾಡಲಾಗಲ್ಲ: ಕಾಂಗ್ರೆಸ್‌ನ ಕನ್ಹಯ್ಯಕುಮಾರ ಮೊದಲು ದೇಶ ತುಕಡೆ ತುಕಡೆ ಮಾಡಲು ಹೋಗಿದ್ದರು. ಅದು ಆಗಲಿಲ್ಲ. ಈಗ ಬಿಜೆಪಿ ತುಕಡೆ ತುಕಡೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಅವರಿಂದ ಯಾವುದನ್ನು ತುಕಡೆ ತುಕಡೆ ಮಾಡಲಾಗಲ್ಲ. ಅವರು 2014, 15, 16, 17, 18, 19 ಹೀಗೆ ಹೇಳುತ್ತಲೇ ಬಂದರು. ಜನ ಅವರಿಗೆ 2019ರಲ್ಲಿ ಯಾವ ಸ್ಥಾನ ತೋರಿಸಬೇಕು ಅದನ್ನು ತೋರಿಸಿದ್ದಾರೆ ಎಂದರು.

ಸಿದ್ದರಾಮಯ್ಯ ಮತ್ತು ಅವರ ಪಕ್ಷ ಮುಸಲ್ಮಾನರನ್ನು ಓಲೈಸಲು ಆರೆಸ್ಸೆಸ್‌ ಬೈಯ್ದರೆ ಅವರಿಂದ ವೋಟು ಸಿಗುತ್ತೆ ಎಂಬ ಭ್ರಮೆಯಿಂದ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್‌ ಸತತ ತುಷ್ಟೀಕರಣದ ರಾಜಕಾರಣವನ್ನೇ ಮಾಡುತ್ತಾ ಬಂದಿದೆ. ಅದರಿಂದ ಅದರ ಸ್ಥಿತಿ ಹೀಗಾಗಿದೆ. ಆದರೂ ಸಿದ್ದರಾಮಯ್ಯನವರು ಬುದ್ಧಿ ಕಲಿಯುತ್ತಿಲ್ಲ ಎಂದರು.


Spread the love

About Laxminews 24x7

Check Also

ರಕ್ಷಾ ಬಂಧನ ದಿನಾಂಕ, ಶುಭ ಸಮಯ, ಮಹತ್ವವನ್ನು ತಿಳಿಯಿರಿ

Spread the love ರಕ್ಷಾ ಬಂಧನ ಸಹೋದರ ಸಹೋದರಿಯರ ನಡುವಿನ ಪ್ರೀತಿಯ ಸಂಕೇತವಾಗಿದೆ. ರಕ್ಷಾ ಬಂಧನ ಹಬ್ಬವನ್ನು ಪ್ರತಿ ವರ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ