ತುಮಕೂರು: ನಮ್ಮದು ರಾಜಾಹುಲಿ ಸರ್ಕಾರ. ನಮ್ಮ ಮುಂದೆ ಯಾವ ಡೈನಾಮಿಕ ಬಂಡೆಯದ್ದು, ನಡೆಯುವುದಿಲ್ಲ ಅಂತಾ ಸಚಿವ ಮಾಧುಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
74 ನೇ ಸ್ವಾತಂತ್ರೋತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಮೀರ ಅಹಮದ್ ನನಗೆ ಒಳ್ಳೆಯ ಸ್ನೇಹಿತ. ಆದರೆ ಗಲಭೆಯಲ್ಲಿ ಮೃತಪಟ್ಟ ಯುವಕರಿಗೆ 5 ಲಕ್ಷ ರೂ. ಕೊಡುವುದಾಗಿ ಹೇಳಿದ್ದಾರೆ. ಏಕೆ ಇಂತಹ ನಿರ್ಧಾರ ತಗೆದುಕೊಂಡಿದ್ದಾರೆ ನನಗೆ ಗೊತ್ತಿಲ್ಲ. ಸಮುದಾಯವನ್ನು ಓಲೈಸಿಕೊಳ್ಳಲು ಬೇರೆ ದಾರಿಗಳಿವೆ. ಇಂತಹ ನಡೆ ಸರಿಯಲ್ಲ ಎಂದರು.
Laxmi News 24×7