Breaking News

ಮದುವೆಗಿಂತಲೂ ಡಿವೋರ್ಸ್​ಗಳನ್ನು ಹೆಚ್ಚು ಸಂಭ್ರಮಿಸಬೇಕು ಎಂದ ರಾಮ್​ಗೋಪಾಲ್ ವರ್ಮಾ

Spread the love

ತೆಲುಗಿನ ಚಿತ್ರರಂಗದ ಸ್ಟಾರ್ ಜೋಡಿ ಸಮಂತಾ ಮತ್ತು ನಾಗಚೈತನ್ಯ ತಮ್ಮ 4 ವರ್ಷಗಳ ದಾಂಪತ್ಯ ಜೀವನಕ್ಕೆ ಡಿವೋರ್ಸ್ ಮೂಲಕ ವಿದಾಯ ಹೇಳಿದ್ದಾರೆ. ಈ ವಿಚಾರವಾಗಿ ಇದೀಗ ಟಾಲಿವುಡ್​ನಿಂದ ಬಾಲಿವುಡ್​ವರೆಗೂ ಚರ್ಚೆಯಾಗುತ್ತಿದೆ. ಸಮಂತಾ-ನಾಗ ಚೈತನ್ಯ ಅಭಿಮಾನಿಗಳಲ್ಲಿ ಇದರಿಂದ ಬೇಸರವೂ ಆಗಿದೆ.

ಈ ಮಧ್ಯೆ ಟಾಲಿವುಡ್​ನ ಸ್ಟಾರ್ ಡೈರೆಕ್ಟರ್ ರಾಮ್ ಗೋಪಾಲ್​ ವರ್ಮಾ ಟ್ವೀಟ್ ಒಂದನ್ನು ಮಾಡಿದ್ದಾರೆ. ತಮ್ಮ ಟ್ವೀಟ್​ನಲ್ಲಿ ಮದುವೆಗಿಂತಲೂ ವಿಚ್ಛೇದನ ಕಾರ್ಯಕ್ರಮಗಳನ್ನು ಹೆಚ್ಚಾಗಿ ಸಂಭ್ರಮಿಸಬೇಕಿದೆ ಎಂದಿದ್ದಾರೆ. ಸಂಭ್ರಮದಿಂದ ಮಾಡಿದ ಬಹುತೇಕ ಮದುವೆಗಳು ಕೆಲವೇ ದಿನಗಳಲ್ಲಿ ಕೊನೆಯಾಗುತ್ತವೆ. ಮತ್ತು ನಿಜವಾದ ಸಂಗೀತ ಮೊಳಗಬೇಕಿರೋದು ಡಿವೋರ್ಸ್ ಈವೆಂಟ್​ಗಳಲ್ಲಿ. ಇಂಥ ಕಾರ್ಯಕ್ರಮಗಳಲ್ಲಿ ಎಲ್ಲ ವಿಚ್ಛೇದಿತ ಗಂಡಸರು ಮತ್ತು ಹೆಂಗಸರು ಕುಣಿಯುತ್ತಿರುತ್ತಾರೆ ಎಂದಿದ್ದಾರೆ.

ಅಲ್ಲದೇ ಮದುವೆಗಳು ನರಕದಲ್ಲಿ ನಿಗದಿಯಾಗುತ್ತವೆ.. ಡಿವೋರ್ಸ್​​ಗಳು ಸ್ವರ್ಗದಲ್ಲಿ ನಿಗದಿಯಾಗುತ್ತವೆ ಅಂತಲೂ ಹೇಳಿದ್ದಾರೆ.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ