ದಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ನಿಗಮವು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 71 ಹುದ್ದೆಗಳಿಗೆ ಐಒಸಿಎಲ್ನಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಕ್ಟೋಬರ್ 1ರಿಂದಲೇ ಅರ್ಜಿ ಸ್ವೀಕಾರ ಪ್ರಕ್ರಿಯೆಯು ಆರಂಭಗೊಂಡಿದ್ದು ಅರ್ಜಿ ಸಲ್ಲಿಸಲು ಅಕ್ಟೋಬರ್ 22 ಕೊನೆಯ ದಿನಾಂಕವಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು iocl.com ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟು ಹುದ್ದೆ : 71
ಕಾಯ್ದಿರಿಸದ ವರ್ಗ : 28 ಹುದ್ದೆಗಳು
ಎಸ್ಸಿ ವರ್ಗ : 10 ಹುದ್ದೆಗಳು
ಎಸ್ಟಿ ವರ್ಗ : 7 ಹುದ್ದೆಗಳು
ಒಬಿಸಿ ವರ್ಗ : 19 ಹುದ್ದೆಗಳು
PwBD ವರ್ಗ : 6 ಹುದ್ದೆಗಳು
EWS ವರ್ಗ : 7 ಹುದ್ದೆಗಳು
ಅರ್ಜಿ ಸಲ್ಲಿಸುವವರು 30 ವರ್ಷ ಮೀರಿರಬಾರದು.
ಲಿಖಿತ ಪರೀಕ್ಷೆ, ಗುಂಪು ಚರ್ಚೆ/ ಟಾಸ್ಜ್ ಹಾಗೂ ವೈಯಕ್ತಿಕ ಸಂದರ್ಶನಗಳ ಆಧಾರದ ಅಡಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ :
1 : ಐಓಸಿಎಲ್ ಅಧಿಕೃತ ವೆಬ್ಸೈಟ್ iocl.comಗೆ ಭೇಟಿ ನೀಡಿ.
2. ಹೋಮ್ಪೇಜ್ನಲ್ಲಿ ವಾಟ್ಸ್ ನ್ಯೂ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
3. Recruitment of Assistant Quality Control Officers – 2021 ಆಯ್ಕೆ ಮೇಲೆ ಕ್ಲಿಕ್ ಮಾಡಿ.
4. ಅಪ್ಲೈ ಆನ್ಲೈನ್ ಆಯ್ಕೆ ಕ್ಲಿಕ್ಕಿಸಿ.
5. ಕೇಳಲಾಗುವ ಮಾಹಿತಿಯನ್ನು ತುಂಬಬೇಕು.
6. ಅರ್ಜಿಯನ್ನು ತುಂಬಬೇಕು.
7. ಅರ್ಜಿ ಶುಲ್ಕವನ್ನು ಪಾವತಿಸಿ ಬಳಿಕ ಸಬ್ಮಿಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
8. ಈ ಅರ್ಜಿಯನ್ನು ಭವಿಷ್ಯದ ಬಳಕೆಗಾಗಿ ಡೌನ್ಲೋಡ್ ಮಾಡಿಟ್ಟುಕೊಳ್ಳಿ.