ಬೆಂಗಳೂರು : ವೃದ್ಧಾಶ್ರಮಗಳಿಗೆ ಸರ್ಕಾರದಿಂದ ಒದಗಿಸುವ ಅನುದಾನವನ್ನು 25 ಲಕ್ಷದಿಂದ 40 ಲಕ್ಷಕ್ಕೆ ಹೆಚ್ಚಳ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ವೃದ್ಧಾಪ್ಯ ಆಶ್ರಮಗಳಿಗೆ ರಾಜ್ಯದಿಂದ ವಾರ್ಷಿಕ 8 ಲಕ್ಷ ಅನುದಾನ ಕೊಡಲಾಗ್ತಿದೆ. ಅನುದಾನ ಮೊತ್ತದಲ್ಲಿ 7 ಲಕ್ಷ ಏರಿಕೆ ಮಾಡಿ ಒಟ್ಟು 15 ಲಕ್ಷ ಅನುದಾನ ಕೊಡ್ತೇವೆ. ಕೇಂದ್ರದಿಂದ ಸದ್ಯ 25 ಲಕ್ಷ ಅನುದಾನ ಬರ್ತಿದೆ. ರಾಜ್ಯದ ಅನುದಾನವೂ ಸೇರಿ ಒಟ್ಟು 40 ಲಕ್ಷ ಅನುದಾನ ಕೊಡುವ ಕೆಲಸ ಮಾಡ್ತೇವೆ ಎಂದು ತಿಳಿಸಿದರು.