ಬೆಂಗಳೂರು, ಆ.15- 74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಪ್ತಗಿರಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಯ ಸಿಬ್ಬಂದಿ 4 ಸಾವಿರ ಅಡಿ ಉದ್ದದ ಅತ್ಯಾಕರ್ಷಕ ಚಿತ್ತಾರಗಳೊಂದಿಗೆ ರಂಗೋಲಿ ಬಿಡಿಸಿ ದೇಶ ಪ್ರೇಮದ ಪಾರಮ್ಯ ಮೆರೆದಿದ್ದಾರೆ.
ವಿದ್ಯಾರ್ಥಿಗಳ ಜತೆ ಸಂಸ್ಥೆಯ ಪ್ರಾಂಶುಪಾಲರು, ಉಪನ್ಯಾಸಕರು ಸಪ್ತಗಿರಿ ಕ್ಯಾಂಪಸ್ ಆಟದ ಮೈದಾನದಲ್ಲಿ ಹಗಲಿರುಳು ಶ್ರಮಿಸಿ ಬೃಹತ್ ತ್ರಿವರ್ಣ ಧ್ವಜ ಬಿಡಿಸಿದ್ದಾರೆ.ವಿನೂತನ ಮಾದರಿಯಲ್ಲಿ ಸ್ವಾತಂತ್ರ್ಯದಿನಾಚರಣೆಗಾಗಿ 2500 ಕೆಜಿ ಉಪ್ಪು ಹಾಗೂ 250 ಕೆಜಿ ಬಿಳಿ, ಕೇಸರಿಹಾಗೂ ಹಸಿರು ಬಣ್ಣದ ರಂಗೋಲಿಯಿಂದ ತಿರಂಗ ಧ್ವಜ ಸಿದ್ಧವಾಗಿದೆ.
ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ತ್ರಿವರ್ಣ ಧ್ವಜ ಬಿಡಿಸುವ ರಂಗೋಲಿ ಸ್ಪರ್ಧೆಯನ್ನು ಕೂಡ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ 2750ಕ್ಕೂ ವಿದ್ಯಾರ್ಥಿಗಳು ನವ ನವೀನರೀತಿಯಲ್ಲಿ ತ್ರಿವರ್ಣ ಧ್ವಜ ಬಿಡಿಸಿ ಗಮನಸೆಳೆದಿದ್ದರು.
ಇದೇವೇಳೆ ವಿದ್ಯಾರ್ಥಿಗಳು ಮಾತನಾಡಿ, ಈ ವರ್ಷ ಸ್ವಾತಂತ್ರ್ಯದಿನಾಚರಣೆ ಅತ್ಯಂತ ವಿಶೇಷವಾಗಿದೆ. ಈ ಬಾರಿ ಕೊರೊನಾ ಮಹಾಮಾರಿಯಿಂದ ಕೆಲಸಮಾಡಿದ ವಾರಿಯರ್ಸ್‍ಗಳಿಗೆ ಸನ್ಮಾನ, ಪೊಲೀಸ್ ವೃಂದ ಹಾಗೂ ವೈದ್ಯಕೀಯ ರಿಂದ ಹಾಗೂ ಸೋಶಿಯಲ್ ವರ್ಕರ್ಸ್‍ಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಾರಿಸಲಾಗಿತ್ತು, ಬಿಬಿಎಂಪಿ ಪೌರ ಕಾರ್ಮಿಕರು ಹಾಗೂ ಆಂಬ್ಯುಲೆನ್ಸ್ ಡ್ರೈವರ್‍ಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ.
ಹೀಗಾಗಿ ನಮ್ಮ ಕಾಲೇಜಿನ ಆಡಳಿತ ಮಂಡಳಿ ಈಬಾರಿಯೂ ವೈಶಿಷ್ಟ್ಯ ಪೂರ್ಣವಾಗಿ ಸ್ವಾತಂತ್ರ್ಯದಿನ ಆಚರಿಸಿದೆ. ಇದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ರಾಮಕೃಷ್ಣ ಸಂಸ್ಥೆಯ ಅಧ್ಯಕ್ಷ ಜಿ.ದಯಾನಂದ್, ನಿರ್ದೇಶಕ ಡಿ.ಜಿ.ಮನೋಜï, ಆಡಳಿತ ಮಂಡಳಿಯ ಶಶಾಂಕ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.