Breaking News

ಮದ್ಯ ಪ್ರಿಯರಿಗೆ ಸಿಹಿ ಸುದ್ದಿ: ಅ.3 ರಿಂದ ಕ್ಲಬ್ ಪಬ್ ಓಪನ್

Spread the love

ಬೆಂಗಳೂರು: ಕೊರೊನಾ ಹಾವಳಿ ಕಡಿಮೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೇರಲಾಗಿದ್ದ ಲಾಕ್ಡೌನ್​​​ ಸಡಿಲಗೊಳಿಸಿ ಸಿಎಂ ಬಸವರಾಜ್​​ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ. ಅದರಲ್ಲೂ ಮದ್ಯ ಪ್ರಿಯರಿಗೆ ಗುಡ್​​ನ್ಯೂಸ್​​ ನೀಡಲಾಗಿದೆ. ಹೌದು, ಅಕ್ಟೋಬರ್​​​ 3ನೇ ತಾರೀಕಿನಿಂದಲೇ ಕ್ಲಬ್​​​, ಪಬ್​​​​​ ತೆರೆಯಲು ಅನುಮತಿ ನೀಡಲಾಗಿದೆ.

ಈ ಬಗ್ಗೆ ಸುದ್ದಿಗಾರರ ಜೊತೆಗೆ ಮಾತಾಡಿದ ಸಿಎಂ​​ ಬೊಮ್ಮಾಯಿ, ‘ರಾಜ್ಯದಲ್ಲಿ ಸರಾಸರಿ 0.66 ಕೋವಿಡ್ ಪ್ರಮಾಣ ಇದೆ. ಸದ್ಯ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಆದ್ದರಿಂದ ಪಾಸಿಟಿವಿ ರೇಟ್​​ ಶೇ.1 ಕ್ಕಿಂತ ಕಡಿಮೆ ಇರುವ ಜಿಲ್ಲೆಯಗಳಲ್ಲಿ ಅಕ್ಟೋಬರ್ 3ರಿಂದಲೇ ಪಬ್​​​, ಕ್ಲಬ್​​ ತೆರೆಯಲು ಗ್ರೀನ್​​ ಸಿಗ್ನಲ್​​​​ ನೀಡಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಪಬ್​​ ಮತ್ತು ಕ್ಲಬ್​​ ಪ್ರವೇಶ ಮಾಡುವವರು ಒಂದು ಡೋಸ್​​ ಲಸಿಕೆಯಾದ್ರೂ ಕಡ್ಡಾಯವಾಗಿ ತಗೆದುಕೊಂಡಿರಲೇಬೇಕು. ಉಳಿದಂತೆ ಸಿನಿಮಾ ಥಿಯೇಟರ್​ ಗಳ ನಿಯಮಗಳೇ ಪಬ್ ಗಳಿಗೂ ಅನ್ವಯ ಆಗಲಿವೆ. ಮೂರನೇ ಅಲೆ ಬಗ್ಗೆ ತಜ್ಞರು ಅಧ್ಯಯನ ಮಾಡುತ್ತಿದ್ದಾರೆ. ಆ ಬಗ್ಗೆ ವರದಿ ಬಂದ ಮೇಲೆ ಆ ವರದಿಯನ್ವಯ ಮುಂದಿನ ನಿರ್ಧಾರಗಳ ಬಗ್ಗೆ ಕ್ರಮ ಕೈಗೊಳ್ಳುತ್ತದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಅಭಿವೃದ್ಧಿಯ ಹರಿಕಾರರು ಶೋಷಿತ ವರ್ಗಗಳ ಆಶಾಕಿರಣ ಬಡವರ ಬಂಧು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಜನ್ಮದಿನಾಚರಣೆ ಸಂಭ್ರಮ

Spread the loveದೇವನಹಳ್ಳಿ:  ರಾಜ್ಯದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ