Breaking News

ಬೆಳಗಾವಿ ಜನರ ಪ್ರೀತಿಗೆ ಬಿ.ಸಿ.ಪಾಟೀಲ್ ಸಂತಸ -“ರೈತರೊಂದಿಗೊಂದು ದಿನ” ಬಗ್ಗೆ ಕೌರವನ ಮಾತು

Spread the love

ಬೆಳಗಾವಿ: ಬೆಳಗಾವಿ ಜಿಲ್ಲೆಯ ರೈತರು ಜನರು ತೋರಿಸಿದ ಪ್ರೀತಿ ಸಂಸ್ಕೃತಿ ಹಳ್ಳಿ ಪದ್ಧತಿ ಕಂಡು ಸಂತಸವಾಗಿದೆ. ಇಲ್ಲಿ ಬಂದು “ರೈತರೊಂದಿಗೊಂದು ದಿನ”ಕಾರ್ಯಕ್ರಮ ಹಮ್ಮಿಕೊಂಡಿದ್ದು ನಿಜಕ್ಕೂ ಸಾರ್ಥಕವಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.

B.C Patil

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬಿವಶಿ ಗ್ರಾಮದಲ್ಲಿ ನಡೆದ 11ನೇ ರೈತರೊಂದಿಗೊಂದು ದಿನ ಕಾರ್ಯಕ್ರಮಕ್ಕೆ ಆಗಮಿಸಿ ವೇದಿಕೆ ಮೇಲೆ ಮಾತನಾಡಿದ ಅವರು, ಕೃಷಿಯಲ್ಲಿ ಅಭಿವೃದ್ದಿಯಾದರೂ ಕೃಷಿಕರು ಅಭಿವೃದ್ದಿಯಾಗುತ್ತಿಲ್ಲ. ಹೀಗಾಗಿ ಇದಕ್ಕೆ ಕಾರಣ ಹುಡುಕಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ “ರೈತರೊಂದಿಗೊಂದು ದಿನ” ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಸಚಿವರಾದ ಬಳಿಕ ಕೃಷಿ ಇಲಾಖೆಯ ಉನ್ನತಾಧಿಕಾರಿಗಳ ಉಪಕುಲಪತಿಗಳ ತಜ್ಞರ ಸಭೆ ನಡೆಸಿ ರೈತರ ಆತ್ಮಹತ್ಯೆಗೆ ಕಾರಣವನ್ನು ಅರಿತು ಪರಿಹರಿಸುವ ಕೆಲಸ ಮಾಡಲಾಗುತ್ತಿದೆ. ಸರ್ಕಾರವನ್ನು ಹುಡುಕಿಕೊಂಡು ರೈತರು ಹೋಗಬಾರದು, ರೈತರನ್ನು ಹುಡುಕಿಕೊಂಡು ಸರ್ಕಾರ ಅವರ ಹತ್ತಿರ ಹೋಗಬೇಕು. ರೈತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ “ರೈತರೊಂದಿಗೊಂದು ದಿನ”ಕಾರ್ಯಕ್ರಮ ಮುಂದುವರೆಸಲಾಗಿದೆ. ರೈತರ ಸಮಸ್ಯೆಯನ್ನು ರೈತರಿಂದಲೇ ಕೇಳಿ ತಿಳಿದು ಪರಿಹಾರ ಕೊಡಬೇಕೆಂಬ ಉದ್ದೇಶ ತಮ್ಮದಾಗಿದೆ ಎಂದರು.

B.C Patil

ಯುವಕರನ್ನು ಕೃಷಿಯತ್ತ ಆಕರ್ಷಿಸುವ ನಿಟ್ಟಿನಲ್ಲಿ “ರೈತರೊಂದಿಗೊಂದು ದಿನ” ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೆಳಗಾವಿ ನಿಜಕ್ಕೂ ಸಮೃದ್ಧಿ ಜಿಲ್ಲೆಯಾಗಿದೆ. ಕೋಲಾರದಲ್ಲಿ ಮಳೆ ಕಡಿಮೆ ಬಂದರೂ ರೈತರು ಸಮೃದ್ಧವಾಗಿದ್ದಾರೆ ಎನ್ನುವುದಕ್ಕೆ ಕಾರಣ “ಸಮಗ್ರ ಕೃಷಿ ಪದ್ಧತಿ”. ಹೀಗಾಗಿ ಕೋಲಾರದ ಸಮಗ್ರ ಕೃಷಿ ಪದ್ಧತಿ ಎಲ್ಲರಿಗೂ ಮಾದರಿಯಾಗಬೇಕು. ಹತ್ತು ಬೆಳೆಗಳಲ್ಲಿ ಐದು ಬೆಳೆಗಳಿಗಾದರೂ ಲಾಭ ಬಂದೇ ಬರುತ್ತದೆ. ಒಂದು ಬೆಳೆ ಕೈಕೊಟ್ಟರೆ ಇನ್ನೊಂದು ಬೆಳೆ ಕೈಹಿಡಿಯುತ್ತದೆ. ವೈಜ್ಞಾನಿಕ ಪದ್ಧತಿಯನ್ನು ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ನುಡಿದರು.

ರೈತರು ಬೆಳೆಯುವ ರೀತಿ ಬದಲಾಗಬೇಕೆಂಬ ನಿಟ್ಟಿನಲ್ಲಿ ಅವರ ಮನೆ ಬಾಗಿಲಿಗೆ ಹೋಗಿ ಸ್ಫೂರ್ತಿ ತುಂಬುವ ಉತ್ತೇಜನಕಾರಿ ಕಾರ್ಯಕ್ರಮ “ರೈತರೊಂದಿಗೊಂದು ದಿನ”. ಸಾವಯವ ಆಹಾರಕ್ಕೆ ಉತ್ತಮ ಬೇಡಿಕೆಯಿದ್ದು, ಅವುಗಳ ಮಾರುಕಟ್ಟೆಯಾಗಬೇಕು. ಎಫ್.ಪಿ.ಓ ಮೂಲಕ ಸಾವಯವ ಆಹಾರ ಉತ್ಪನ್ನಗಳನ್ನು ತಯಾರಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಹಾರ ಸಂಸ್ಕರಣ ಘಟಕಗಳನ್ನು ಕೂಡ ರೈತರಿಗೆ ಸರ್ಕಾರ ನೀಡುತ್ತಿದೆ. ಹೈನು, ಕುರಿಸಾಗಾಣಿಕೆ, ಜೇನುಸಾಗಾಣಿಕೆ ಹೀಗೆ ಎಲ್ಲವನ್ನು ಕೃಷಿಕರು ಅಳವಡಿಸಿಕೊಳ್ಳಬೇಕು. ಕಬ್ಬಿನ ಹೊಸ, ಹೊಸ ತಳಿಗಳನ್ನು ಕಂಡು ಸಂತಸವಾಗಿದೆ. ರೈತರ ಜೊತೆಗೆ ಅವರ ಮಕ್ಕಳೊಂದಿಗೆ ಸಂವಾದ ಮಾಡುವುದಾಗಿ ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್ ಪರಿಹಾರ ಕಾರ್ಯ ನಡೆದು ವರದಿ ಸಲ್ಲಿಕೆಯಾಗಿದೆ. ಸದ್ಯದಲ್ಲಿಯೇ ಎನ್.ಡಿ.ಆರ್.ಎಫ್ ಎಸ್.ಡಿ.ಆರ್.ಎಫ್ ಅಡಿ ಪರಿಹಾರ ರೈತರಿಗೆ ಬರಲಿದೆ ಎಂದರು. ಈ ಸಂದರ್ಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಸಚಿವೆ ಶಶಿಕಲಾ ಜೊಲ್ಲೆ ಸೇರಿದಂತೆ ಜಿಲ್ಲೆಯ ಮುಖಂಡರು ಕೃಷಿ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ