ಧಾರವಾಡ: ಜಿಲ್ಲೆಯಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಾದಂಬರಿಕಾರ ಕುಂ. ವೀರಭದ್ರಪ್ಪ ಭಾರತ್ ಬಂದ್ ವಿಚಾರವಾಗಿ ಕಳಕಳಿ ವ್ಯಕ್ತಪಡಿಸಿದ್ದಾರೆ.
ನಾಳೆ ರೈತರು ಬಂದ್ ಮಾಡುತ್ತಿದ್ದಾರೆ, ರೈತರ ಮಾತುಗಳನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ. ರೈತರು, ಕಾರ್ಮಿಕರು, ಶಿಕ್ಷಕರ ಮಾತುಗಳನ್ನು ಸರ್ಕಾರ ಕೇಳಿಸಿಕೊಳ್ಳುತ್ತಿಲ್ಲ. ಈ ಸರ್ಕಾರದಲ್ಲಿ ಶೇ. 72ರಷ್ಟು ಕ್ರಿಮಿನಲ್‌ಗಳಿದ್ದಾರೆ, ಅವರು ಚುನಾಯಿತ ಪ್ರತಿನಿಧಿಗಳಿದ್ದಾರೆ. ಅವರು ಈ ದೇಶವನ್ನು ಆಳುತ್ತಿದ್ದಾರೆ, ಕೋಟ್ಯಾಧೀಶರು ಆಳುತ್ತಿದ್ದಾರೆ. ಅವರಿಂದ ಬಡವರ ಆಕ್ರಂದನ, ನೋವು, ನಲಿವಿಗೆ ಪರಿಹಾರ ಸೂಚಿಸಲು ಸಾಧ್ಯವಿಲ್ಲ ಎಂದು ಕುಂ. ವೀರಭದ್ರಪ್ಪ ಹೇಳಿದ್ದಾರೆ.
ಮುಂದುವರೆದು.. ಇದಕ್ಕಾಗಿ ಲೇಖಕರು ಏನಾದರೂ ಮಾಡಬೇಕು. ಲೇಖಕರು ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳಬಾರದು. ಈಗ ಲೇಖಕರು ಬೀದಿಯಲ್ಲಿ ಇಳಿಯಬೇಕು. 1973-78ರ ನಡುವೆ ನಡೆದ ಚಳವಳಿಗೆ ಮರುಹುಟ್ಟು ನೀಡುವ ಕೆಲಸ ಮಾಡಬೇಕಿದೆ. ಅಂತಹ ಚಳವಳಿಗಳ ರೂವಾರಿ ಚಂಪಾ. ಆದರೆ ಅವರು ವೃದ್ಧಾಶ್ರಯದಲ್ಲಿ ಮಲಗಿದ್ದಾರೆ. ಇದರಿಂದ ಇಡೀ ಚಳವಳಿಗಳ ರೂಪವೇ ಮಲಗಿದಂತೆ ಆಗಿದೆ ಎಂದು ಹೇಳಿದ್ದಾರೆ.