Breaking News

ಚಾಮರಾಜನಗರ ಜಿಲ್ಲೆಯಲ್ಲೂ ಬಂದ್ ಆಚರಿಸಲು ಸಿದ್ಧತೆ

Spread the love

ಚಾಮರಾಜನಗರ: ಕೃಷಿ ಕಾನೂನುಗಳು, ಸರ್ಕಾರಿ ಸಂಸ್ಥೆಗಳ ಖಾಸಗೀಕರಣ, ಇಂಧನ, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ರೈತ ಸಂಘಟನೆಗಳು ಸೋಮವಾರ (ಸೆ.27) ಕರೆ ನೀಡಿರುವ ಭಾರತ ಬಂದ್ ಅನ್ನು ಜಿಲ್ಲೆಯಲ್ಲೂ ಅಚರಿಸಲು ರೈತ ಸಂಘಟನೆಗಳು, ವಿರೋಧ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಸಿದ್ಧತೆ‌ ನಡೆಸಿವೆ.

ಚಾಮರಾಜನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಈಗಾಗಲೇ ರೈತ ಸಂಘಟನೆಗಳು ಹಾಗೂ ಇತರ ಸಂಘಟನೆಗಳ ಪ್ರತಿನಿಧಿಗಳು ಸಭೆ ಸೇರಿ ಬಂದ್‌ ಆಚರಿಸಲು ಹಾಗೂ ಸಮಾಜದ ಎಲ್ಲ ವರ್ಗದವರೂ ಇದಕ್ಕೆ ಸ್ವಯಂ ಪ್ರೇರಿತರಾಗಿ ಬೆಂಬಲ ನೀಡಲು ಮನವಿ ಮಾಡಿದ್ದಾರೆ.

ಕರ್ನಾಟಕ ರಕ್ಷಣಾ ಪಡೆ ಸೇರಿದಂತೆ ವಿವಿಧ ಕನ್ನಡ, ಕಾರ್ಮಿಕ ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಿಸಿವೆ. ರಾಜಕೀಯ ಪಕ್ಷಗಳಾದ ಬಿಎಸ್‌ಪಿ ಹಾಗೂ ಎಸ್‌ಡಿಪಿಐ ಕೂಡ ಬಂದ್‌ ಪರವಾಗಿವೆ. ವರ್ತಕರು, ಆಟೊ, ಟ್ಯಾಕ್ಸಿಗಳ ಚಾಲಕರು ಹಾಗೂ ಮಾಲೀಕರು ಇನ್ನೂ ನಿರ್ಧಾರ ಕೈಗೊಂಡಿಲ್ಲ.

ಬೆಂಬಲಿಸುವಂತೆ ಬೈಕ್‌ ರ‍್ಯಾಲಿ: ಈ ಮಧ್ಯೆ, ಸೋಮವಾರ ಭಾರತ ಬಂದ್‌ ಅನ್ನು ಬೆಂಬಲಿಸುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘ, ಕನ್ನಡ ಪರ ಸಂಘಟನೆಗಳು, ಬಹುಜನ ಸಮಾಜ ಪಕ್ಷದ ಪದಾಧಿಕಾರಿಗಳು ಭಾನುವಾರ ನಗರದಲ್ಲಿ ಬೈಕ್ ರ‍್ಯಾಲಿ ಮೂಲಕ ತಟ್ಟೆ, ಚಮಕ ಕುಟ್ಟುವ ಜಾಗೃತಿ ಮೂಡಿಸಿದರು.

ಪ್ರವಾಸಿಮಂದಿರ ಆವರಣದಿಂದ ಆರಂಭವಾದ ರ‍್ಯಾಲಿ ದೊಡ್ಡಂಗಡಿ ಬೀದಿ, ಭುವನೇಶ್ವರಿ ವೃತ್ತ, ಸಂತೇಮರಹಳ್ಳಿ ವೃತ್ತ, ತಾಲ್ಲುಕು ಕಚೇರಿ, ಸೋಮವಾರಪೇಟೆ, ಹಳೆಯ ಆರ್‌ಟಿಒ, ಜೀವವಿಮೆ ಕಚೇರಿ, ನಂಜನಗೂಡು ವೃತ್ತ, ಸಂಪಿಗೆ ರಸ್ತೆಯ ಮೂಲಕ ಹಳೆಯ ಖಾಸಗಿ ಬಸ್ ನಿಲ್ದಾಣ, ಚಾಮರಾಜೇಶ್ವರ ದೇವಸ್ಥಾನ ಮುಂಭಾಗ ಮುಕ್ತಾಯಗೊಂಡಿತು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ‘ದೇಶದಲ್ಲಿ ಕೇಂದ್ರ ಸರ್ಕಾರ ಕೃಷಿ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿರುವ ನೀತಿ ಖಂಡಿಸಿ ದೆಹಲಿಯಲ್ಲಿ 10 ತಿಂಗಳಿಂದ ನಿರಂತರ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಪ್ರತಿಭಟನೆಯಲ್ಲಿ ಸಾವಿರಾರು ಮುಗ್ಧ ರೈತರು ಮೃತಪಟ್ಟಿದ್ದರು. ಸಮಸ್ಯೆ ಬಗೆಹರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ’ ಎಂದು ದೂರಿದರು.


Spread the love

About Laxminews 24x7

Check Also

ರೋರಿಂಗ್ ಸ್ಟಾರ್ ಶ್ರೀಮುರಳಿ ಸಿನಿಮಾಗೆ ಬಹುಬೇಡಿಕೆ ಸಂಗೀತ ನಿರ್ದೇಶಕ‌ ಎಂಟ್ರಿ…’ಪರಾಕ್’ಗೆ ಚರಣ್ ರಾಜ್ ಟ್ಯೂನ್.

Spread the loveಬೆಂಗಳೂರು: ಅರ್ಜುನ್ ಜನ್ಯ, ಹರಿಕೃಷ್ಣ ನಂತರ ಕನ್ನಡ ಚಿತ್ರರಂಗದ ಸಂಗೀತ ಲೋಕದಲ್ಲಿ ಹೊಸ ಅಲೆ ಎಬ್ಬಿಸುತ್ತಿರುವವರು ಚರಣ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ