Breaking News

ರಸ್ತೆ ಗುಂಡಿ ಸರಿಪಡಿಸದ ಇಂಜಿನಿಯರ್​​ಗಳಿಗೆ ಅಮಾನತು ಶಿಕ್ಷೆ.!

Spread the love

ನಗರದ ಕೆಟ್ಟ ರಸ್ತೆಗಳಿಗೆ ಪಾಲಿಕೆ ನಾಲ್ವರು ಇಂಜಿನಿಯರ್​ಗಳೇ ನೇರ ಹೊಣೆ ಎಂದು ಹೇಳಿದ ಮಹಾರಾಷ್ಟ್ರದ ಥಾಣೆ ನಾಗರಿಕ ಆಯುಕ್ತ ಡಾ. ವಿಪಿನ್​ ಶರ್ಮಾ ಅವರನ್ನು ಅಮಾನತುಗೊಳಿಸಿದ್ದಾರೆ.

ಈ ನಾಲ್ವರು ಇಂಜಿನಿಯರ್​ಗಳು ರಸ್ತೆಗಳಲ್ಲಿ ಗುಂಡಿ ತುಂಬಿಸುವ ಕಾರ್ಯ ಮಾಡಿಲ್ಲ ಹಾಗೂ ಗುತ್ತಿಗೆದಾರರ ಕಳಪೆ ಕಾಮಗಾರಿಯ ಬಗ್ಗೆಯೂ ಲಕ್ಷ್ಯ ನೀಡಿಲ್ಲ ಎಂದು ಶರ್ಮಾ ಹೇಳಿದ್ದಾರೆ.

ಉತ್ತಲ್ಸರ್​​ ವಾರ್ಡ್ ಎಕ್ಸಿಕ್ಯೂಟಿವ್​ ಇಂಜಿನಿಯರ್ ಚೇತನ್​ ಪಡೆಲ್​, ವಾರ್ತಾಕ್​ ನಗರ ವಾರ್ಡ್​ನ ಪ್ರಕಾಶ್​ ಕಡ್ತಾರೆ, ಜ್ಯೂನಿಯರ್​ ಇಂಜಿನಿಯರ್​ ಸಂದೀಪ್​ ಸಾವಂತ್​ ಹಾಗೂ ಲೋಕಮಾನ್ಯ ಸಾರ್ವಕರ್​ ನಗರ ವಾರ್ಡ್​ನ ಸಂದೀಪ್​ ಗಾಯಕ್ವಾಡ್​ರನ್ನು ಅಮಾನತು ಮಾಡಲಾಗಿದೆ.

ಸಚಿವ ಏಕನಾಥ ಶಿಂಧೆ ಶುಕ್ರವಾರ ನಗರದ ರಸ್ತೆಗಳ ಸಮೀಕ್ಷೆ ನಡೆಸಿದ ಬೆನ್ನಲ್ಲೇ ಪಾಲಿಕೆಯಿಂದ ಈ ನಿರ್ಧಾರ ಇಂದು ಹೊರಬಿದ್ದಿದೆ. ರಸ್ತೆಗಳ ಅವ್ಯವಸ್ಥೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದರು.


Spread the love

About Laxminews 24x7

Check Also

ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣವನ್ನೂ ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿ: ಎಂ.ಬಿ ಪಾಟೀಲ್

Spread the loveಬೆಂಗಳೂರು: ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ