Breaking News

ಮಧ್ಯರಾತ್ರಿ ವೀಕೆಂಡ್ ಮೋಜು-ಮಸ್ತಿ; ಮತ್ತೊಂದು ಐಷಾರಾಮಿ ಕಾರು ಭೀಕರ ಅಪಘಾತ

Spread the love

ಬೆಂಗಳೂರು: ಕೋರಮಂಗಲ ಮತ್ತು ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಭೀಕರ ಅಪಘಾತದ ಬಳಿಕವೂ ಯುವಕರು ಎಚ್ಚೆತ್ತುಕೊಂಡಿಲ್ಲ. ಮತ್ತೆ ವೀಕೆಂಡ್​ನಲ್ಲಿ ಮೋಜು ಮಸ್ತಿ ಅಂತಾ ಐಷಾರಾಮಿ ಕಾರುಗಳಲ್ಲಿ ಸುತ್ತಾಡ್ತಿದ್ದಾರೆ.‌ ಇದೇ ಮೋಜು ಮಸ್ತಿಯಲ್ಲಿ ಸಿಲಿಕಾನ್​ ಸಿಟಿಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ.

ಸಂಪೂರ್ಣವಾಗಿ ನಜ್ಜುಗುಜ್ಜಾಗಿರೋ ಇಟಿಯೋಸ್​ ಕಾರು, ಗುದ್ದಿದ ರಭಸಕ್ಕೆ ಫೋರ್ಷೆ ಕಾರಿನ ಬಂಪರೇ ಕಿತ್ತೋಗಿದೆ. ಸ್ಥಳದಲ್ಲಿ ಪರಿಶೀಲನೆ ನಡೆಸ್ತಿರೋ ಪೊಲೀಸರು. ಸಿಲಿಕಾನ್​ ಸಿಟಿಯಲ್ಲಿ ಮತ್ತೊಂದು ಐಷಾರಾಮಿ ಕಾರಿನ ಅಪಘಾತ ಸಂಭವಿಸಿದೆ.

ದೊಮ್ಮಲೂರು ರಸ್ತೆ ಬಳಿ ತನ್ನ ಪಾಡಿಗೆ ತಾನು ಹೋಗ್ತಿದ್ದ ರೆಡ್ ಇಟಿಯೋಸ್ ಕಾರಿಗೆ ಐಷಾರಾಮಿ ಪೋರ್ಷೆ ಕಾರು ಡಿಕ್ಕಿ ಹೊಡೆದಿದ್ದು, ಎರಡೂ ಕಾರುಗಳು ಸಂಪೂರ್ಣ ಜಖಂ ಆಗಿವೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ. ಟೆಕ್ಸ್ಟೈಲ್ ಕಂಪನಿಯೊಂದರ ಮಾಲೀಕನ ಮಗ ಜುವೇರ್ ಮವಾನಿ ಎಂಬಾತ ತನ್ನ ಗೆಳತಿ ಶ್ರೇಯಾ ಜೊತೆ ಇಂದಿರಾನಗರದಿಂದ ಪೋರ್ಷೆ ಕಾರಿನಲ್ಲಿ ಹೈ ಸ್ಪೀಡ್​ಲ್ಲಿ ಬರ್ತಿರುವಾಗ ಇಟಿಯೋಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಎದುರಿಗಿದ್ದ ಕಾರು ರಿವರ್ಸ್ ಆಗಿ ಜಖಂ ಆಗಿದ್ದು, ಇಟಿಎಸ್ ಕಾರಿಗೆ ಡಿಕ್ಕಿ ಹೊಡೆಯೋದಲ್ಲದೇ ಅಲ್ಲೇ ಇದ್ದ ಮಿಲಿಟರಿ ಆಸ್ಪತ್ರೆ ಗೇಟ್​ಗೂ ಡಿಕ್ಕಿ ಹೊಡೆದಿದೆ.

ಪೋರ್ಷೆ ಕಾರ್​ನಲ್ಲಿ ಜುವೇರ್ ಮತ್ತು ಶ್ರೇಯಾ ಇದ್ರೆ ಇಟಿಎಸ್ ನಲ್ಲಿ ಚಾಲಕ ಹಾಗೂ ಇಬ್ಬರು ಪ್ರಯಾಣಿಕರಿದ್ರು. ಇಷ್ಟು ಭೀಕರ ಅಫಘಾತವಾದ್ರೂ ಯಾರ ಪ್ರಾಣಕ್ಕೂ ಅಪಾಯವಾಗಿಲ್ಲ ಅನ್ನೋದು ಸಮಾಧಾನಕರ ವಿಷ್ಯವಾದ್ರೂ ಸರಣಿ ಅಪಘಾತಗಳಿಂದ ಯುವಕರು ಎಚ್ಚೆತ್ತುಕೊಳ್ಳದಿರೋದು ನಿಜಕ್ಕೂ ವಿಪರ್ಯಾಸ.

ಇತ್ತೀಚೆಗೆ ವೀಕೆಂಡ್​ನಲ್ಲೇ ಸರಣಿ ಅಪಘಾತ ನಡೆಯುತ್ತಿದ್ದು ಪೊಲೀಸರು ಗಸ್ತು ತಿರುಗುತ್ತಿದ್ದಾರೆ, ಇಷ್ಟಾದ್ರೂ ದುಡ್ಡು, ಅಧಿಕಾರ ಇರೋ ಗತ್ತಿನಲ್ಲಿ ಕೆಲವು ದೊಡ್ಡವರ ಮಕ್ಕಳು ಆಟಾಟೋಪ ಪ್ರದರ್ಶಿಸಿ ತಮ್ಮ ಜೊತೆಗೆ ಉಳಿದವರ ಪ್ರಾಣಕ್ಕೂ ಸಂಚಕಾರ ತರ್ತಿದ್ದಾರೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ