ಬೆಂಗಳೂರು: ಗರ್ಭಿಣಿಗೆ ಡಾಕ್ಟರ್ ಬದಲು ನರ್ಸ್ಗಳು ಹೆರಿಗೆ ಮಾಡಿಸಿದ್ದರಿಂದ ನವಜಾತ ಗಂಡು ಮಗು ಸಾವನಪ್ಪಿದೆ ಎಂಬ ಆರೋಪ ಕೇಳಿ ಬಂದಿದೆ. ನಗರದ ಕೋಣನಕುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವಿರುದ್ಧ ಹೀಗೊಂದು ಆರೋಪ ಖುದ್ದು ಮಗು ಕಳೆದುಕೊಂಡ ತಾಯಿ ಪವಿತ್ರ ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ.
ಪಲ್ಲವಿ, ಕೋಣನಕುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಚೆಕಪ್ ಮಾಡಿಸುತ್ತಿದ್ದರು. ಇನ್ನು ನಿನ್ನೆ ರಾತ್ರಿ 10.30ಕ್ಕೆ ಪವಿತ್ರಗೆ ಹೆರಿಗೆ ನೋವು ಕಾಣಿಸಿಕೊಂಡ ಈ ಹಿನ್ನೆಲೆ ಆಕೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮತ್ತೆ ಗರ್ಭಿಣಿಗೆ ಬೆಳಗಿನ ಜಾವ 4 ರಿಂದ 4.30 ರ ಸಮಯದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿತ್ತು.
ಆಗ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣ ನರ್ಸ್ಗಳೇ ಹೆರಿಗೆ ಮಾಡಿಸಿದ್ದಾರೆ. ಈ ವೇಳೆ ಮಗುವಿನ ತಲೆ ಹೊರಬಂದು ಕಟ್ ಆಗಿ ಮಗು ಸಾವನ್ನಪ್ಪಿದೆ. ಆದ್ದರಿಂದ ವೈದ್ಯರು ಹೆರಿಗೆ ಮಾಡಿಸಿದ್ರೆ ಮಗು ಉಳಿಯುತ್ತಿತ್ತು. ನರ್ಸ್ಗಳು ಹೆರಿಗೆ ಮಾಡಿಸಿದ್ದರಿಂದಲೇ ಮಗು ಸಾವನ್ನಪ್ಪಿದೆ ಅಂತಾ ಪವಿತ್ರ ಹಾಗೂ ಕುಟುಂಬಸ್ಥರು ಗಂಭೀರ ಆರೋಪ ಎಸಗಿದ್ದಾರೆ.