ಬೆಳಗಾವಿ: ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಹಾಳಾದ ರಸ್ತೆಯಿಂದ ಬೇಸತ್ತ ಕೆಲ ಅಪರಿಚಿತರು ವ್ಯಂಗ್ಯ ಭಾಷೆಯ ಮೂಲಕ ಅಲ್ಲಲ್ಲಿ ಶಾಸಕಿ ವಿರುದ್ಧ ಬ್ಯಾನರ್ ಹಾಕಿ ಪ್ರತಿಭಟಿಸಿದ್ದಾರೆ.
ಗ್ರಾಮೀಣ ಮತಕ್ಷೇತ್ರದಲ್ಲಿ ಶಾಸಕಿಯ ವಿರುದ್ಧ ಬ್ಯಾನರ್ ವಾರ್ ಶುರುವಾಗಿದ್ದು ಅಪರಿಚಿತರು ಉಚ್ಚಗಾಂವ್, ತಾರಿಹಾಳ ಬೆಳಗಾವಿ ರಸ್ತೆಯಲ್ಲಿ ಬ್ಯಾನರ್ ಹಾಕಿ ಲೇವಡಿ ಮಾಡಿದ್ದಾರೆ. ಬ್ಯಾನರ್ನಲ್ಲಿ ಒಂದು ಭಾಗದಲ್ಲಿ ಹಾಳಾದ ರಸ್ತೆಯ ಫೋಟೋ ಇನ್ನೊಂದೆಡೆ ವ್ಯಕ್ತಿಯೊರ್ವ ತಲೆ ಮೇಲೆ ಕೈಹೊತ್ತು ಕುಳಿತಿರುವ ಚಿತ್ರ ಹಾಕಲಾಗಿದೆ.

ಜೊತೆಗೆ ಶಾಸಕಿಯ ಹೆಸರು ಉಲ್ಲೇಖಿಸದೇ ‘ಅಕ್ಕಾ’ ಎಂದು ಮರಾಠಿ ಮತ್ತು ಕನ್ನಡ ಭಾಷೆಯಲ್ಲಿ ವ್ಯಂಗ್ಯ ಬರಹಗಳನ್ನು ನಮೂದಿಸಲಾಗಿದೆ. ಅಪರಿಚಿತರ ಈ ವಿಭಿನ್ನ ಪ್ರತಿಭಟನೆಯನ್ನ ನೋಡಿದ ಸ್ಥಳೀಯರು ನಗೆಗಡಲಲ್ಲಿ ತೇಲುತ್ತಿದ್ದಾರೆ. ಅಕ್ಕಾ ಫಾರ್ಮದಾಗ್ ರೊಕ್ಕಾ ತಗೊಂಡ ಹೊಕ್ಕಾರ್, ನೀವು ಸೊಂಟ ಮುರ್ಕೊಂಡ್ ಮನ್ಯಾಗ್ ಕುಂದ್ರಿ ಎಂಬ ಆಕ್ರೋಶಭರಿತ ವಾಖ್ಯಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.