ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಪೊಲೀಸ್ ಠಾಣೆ ವ್ಯಾಪ್ತಿಯ ತೇರದಾಳ ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ 13 ಗಾಂಜಾ ಗಿಡಗಳನ್ನು ಜಪ್ತಿ ಮಾಡಿಕೊಂಡಿರುವ ತೇರದಾಳ ಪೊಲೀಸರು ಓರ್ವ ಜಮೀನು ಸಾಗುವಳಿದಾರನನ್ನು ಬಂಧಿಸಿರುವ ಘಟನೆ ತೇರದಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜುಗಲಾಸಾರ, ಜಮಖಂಡಿ ಡಿವಾಯ್ ಎಸ್ ಪಿ ಎಂ. ಪಾಂಡುರಂಗಯ್ಯ ಅವರ ಮಾರ್ಗದರ್ಶನದಲ್ಲಿ ರಬಕವಿ-ಬನಹಟ್ಟಿ ತಹಶಿಲ್ದಾರರ ಸಂಜಯ ಇಂಗಳೆ ಸಮಕ್ಷಮದಲ್ಲಿ ಖಚಿತ ಮಾಹಿತಿ ಆದರಿಸಿ ತೇರದಾಳ ಠಾಣಾಧಿಕಾರಿ ರಾಜು ಬೀಳಗಿ ಅವರ ತಂಡ ತೇರದಾಳ ವ್ಯಾಪ್ತಿಯ ಜಮೀನಿನಲ್ಲಿ ಬೆಳೆದಿದ್ದ 13 ಗಾಂಜಾ ಗಿಡಗಳು, ಒಟ್ಟು 7ಕೆಜಿ, 490 ಗ್ರಾಂನ ರೂ. 37,450/- ಬೆಲೆಬಾಳುವ ಗಾಂಜಾ ಬೆಳೆ ಜಪ್ತಿ ಮಾಡಿಕೊಂಡಿರುತ್ತಾರೆ.
ಈ ಕುರಿತು ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬನಹಟ್ಟಿ ಪೊಲೀಸ್ ವೃತ್ತ ನಿರೀಕ್ಷಕರಾದ ಜೆ. ಕರುಣೇಶಗೌಡ ಪ್ರಕರಣದ ತನಿಖೆ ಕೈಗೊಂಡು, ಗಾಂಜಾ ಬೆಳೆದ ವ್ಯಕ್ತಿಯನ್ನು ಬಂದಿಸಿದ್ದರೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ತೇರದಾಳ ಠಾಣೆಯ ಸಿಬ್ಬಂದಿಗಳಾದ ಕೆ. ಎಚ್. ಸನ್ನಟ್ಟಿ, ಎಂ. ಆರ್. ಕೆಂಚನ್ನವರ, ಎ. ಬಿ. ಸವದಿ, ಎಮ್. ಎಮ್. ಎತ್ತಿನಮನಿ, ಎಸ್. ಎಸ್. ಜಕಾತಿ, ಎಸ್. ಐ. ಸೋನಾವಣೆ, ಎಮ್. ಆರ್. ಗುರವ ಇದ್ದರು. ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜುಗಲಾಸರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.