Breaking News

ಮಗುವನ್ನ ಶಾಲೆಗೆ ಸೇರಿಸಲು ಬಂದ ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡ ಹೆಡ್ ಮಾಸ್ಟರ್

Spread the love

ಬೆಂಗಳೂರು: ನಗರದ ಕೋದಂಡರಾಮಪುರ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯ ಲೋಕೇಶಪ್ಪ ಎಂಬಾತ ಮಗುವಿನ ದಾಖಲಾತಿಗೆಂದು ಬಂದ ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡ ಘಟನೆ ನಡೆದಿದೆ. ಸದ್ಯ ಲೋಕೇಶಪ್ಪನನ್ನ ಸೇವೆಯಿಂದ ಅಮಾನತು ಮಾಡಲಾಗಿದೆ.

ಕೋದಂಡರಾಮಪುರ ಪ್ರೌಢಶಾಲೆಗೆ ತಮ್ಮ ಮಗುವನ್ನ ದಾಖಲು ಮಾಡಲೆಂದು ಮಹಿಳೆಯೋರ್ವರು ಶಾಲೆಗೆ ಬಂದರೆ ಆ ಮಹಿಳೆಯಿಂದಲೇ ಹೆಡ್ ಮಾಸ್ಟರ್ ಲೋಕೇಶಪ್ಪ ಮಸಾಜ್ ಮಾಡಿಸಿಕೊಂಡಿದ್ದಾನೆ. ಈ ಸಂಬಂಧ ಸಿಸಿಟಿವಿ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಚಾರವಾಗಿ ಪ್ರಶ್ನಿಸಿದಾಗ ತಾನು ಮಸಾಜ್ ಮಾಡಿಸಿಕೊಂಡಿದ್ದಾಗಿ ಹೆಡ್ ಮಾಸ್ಟರ್ ಲೋಕೇಶಪ್ಪ ಒಪ್ಪಿಕೊಂಡಿದ್ದಾನೆ.

ಸರ್ಕಾರಿ ಕಟ್ಟಡವನ್ನು ದುರ್ಬಳಕೆ ಮಾಡಿರುವುದು, ಸರ್ಕಾರಿ ಕೆಲಸದ ಸಮಯದಲ್ಲಿ ಕರ್ತವ್ಯಲೋಪ ಎಸಗಿರುವ ಆರೋಪದ ಹಿನ್ನೆಲೆ ಹೆಡ್ ಮಾಸ್ಟರ್ ಲೋಕೇಶಪ್ಪನನ್ನ ಸೇವೆಯಿಂದ ಅಮಾನತು ಮಾಡಲಾಗಿದೆ.


Spread the love

About Laxminews 24x7

Check Also

ಕರ್ನಾಟಕ ಹವಾಮಾನ ವರದಿ: ರಾಜ್ಯದ ಹಲವೆಡೆ ಇಂದು ಗುಡುಗು ಸಹಿತ ಲಘು ಮಳೆಯ ಸೂಚನೆ

Spread the loveಬೆಂಗಳೂರು: ರಾಜ್ಯದಲ್ಲಿ ಹಲವು ದಿನಗಳಿಂದ ಶುಷ್ಕ ವಾತಾವರಣವೇ ಆವರಿಸಿದ್ದು, ಇನ್ನು ಕೆಲ ದಿನಗಳಲ್ಲಿ ಬೆಂಗಳೂರು ಬಿಸಿಲಿನ ಬೇಗೆಯಿಂದ ತತ್ತರಿಸಲಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ