ಕೃಷ್ಣ ಸುಂದರಿ.. ಹೆಸರೇ ಹೇಳುವಂತೆ ಬೆಣ್ಣೆ ಕಳ್ಳ, ನೀಲಿ ವರ್ಣದ ಮುದ್ದು ಕೃಷ್ಣನ ಭಕ್ತೆ ನಮ್ಮ ಶ್ಯಾಮ. ಬಣ್ಣಕ್ಕಿಂತ ಮನಸ್ಸು ಮುಖ್ಯ ಎನ್ನುವ ಮಾನವೀಯ ಮೌಲ್ಯಗಳನ್ನ ಹೊಂದಿರುವ ಅಖಿಲ್ ಸಮಾಜದ ಮಾತುಗಳಿಗೆ ತಲೆ ಕೆಡಸಿಕೊಳ್ಳದೇ ಅಮ್ಮನ ವಿರೋಧದ ನಡುವೆ ಶ್ಯಾಮಳನ್ನು ಮದುವೆಯಾಗುತ್ತಾನೆ. ಇವರಿಬ್ಬರ ಜರ್ನಿಯೇ ಕೃಷ್ಣ ಸುಂದರಿ.
ಜ್ಹೀ ಕನ್ನಡ ಅಂದ್ರೆ ಅಲ್ಲಿ ಹೊಸತನದ ಪ್ರಯೋಗಗಳು ಇರಲೇಬೇಕು ಎಂಬುವಷ್ಟು ವಿಭಿನ್ನ ಕಥೆಗಳನ್ನ ಕೊಡುಗೆ ನೀಡಿರುವ ಹೆಮ್ಮೆ ವಾಹಿನಿಯದ್ದು. ಇನ್ನೂ ಕನ್ನಡಕ್ಕೆ ಸಾಕಷ್ಟು ಧಾರಾವಾಹಿಗಳು ಡಬ್ ಆಗಿದ್ದು, ಪ್ರೇಕ್ಷಕರಿಂದ ಶಬ್ಬಾಷ್ ಎನಿಸಿಕೊಂಡಿವೆ.. ತೆಲುಗಿನ ಕೃಷ್ಣ ತುಳಸಿ ಆ ಸಾಲಿನಲ್ಲಿ ಈಗ ಪೈಪೋಟಿ ನೀಡುತ್ತಿರುವ ಟಾಪ್ ಲಿಸ್ಟ್ನ ಸೀರಿಯಲ್.
ಕೃಷ್ಣ ತುಳುಸಿ ಕನ್ನಡಕ್ಕೆ ಕೃಷ್ಣ ಸುಂದರಿಯಾಗಿ ಡಬ್ ಆಗಿದ್ದು, 100 ಎಪಿಸೋಡ್ಗಳನ್ನ ಕಂಪ್ಲೀಟ್ ಮಾಡಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಈ ಧಾರಾವಾಹಿಯ ಇನ್ನೊಂದು ವಿಷೇಶ ಅಂದ್ರೆ ತಾರಾಬಳಗದ ಬಹುತೇಕರು ಕನ್ನಡಿಗರು.
ಲೀಡ್ ಪಾತ್ರಗಳನ್ನ ನಿರ್ವಹಿಸುತ್ತಿರುವ ಶ್ಯಾಮಾ ಅಂದ್ರೆ ಐಶ್ವರ್ಯ ಹೆಚ್ ಹಾಗೂ ಅಖಿಲ್ ಅಲಿಯಾಸ್ ದಿಲೀಪ್ ಶೆಟ್ಟಿ ಕನ್ನಡದವರು. ಅತ್ತೆ ಪಾತ್ರ ನಿರ್ವಹಿಸುತ್ತಿರುವ ಲಕ್ಷ್ಮೀ ಸಿದ್ದಯ್ಯ, ಪ್ರಿಯಾಂಕಾ ಶಿವಣ್ಣ ಕೂಡ ಕನ್ನಡದ ನಟಿಯರು. ಒಟ್ಟಿನಲ್ಲಿ ಪತಿ ಅಖಿಲ್ನ ಸಹಕಾರದಿಂದ ಶ್ಯಾಮಾ ದೊಡ್ಡ ಗಾಯಕಿಯಾಗಿದ್ದು, ವರ್ಣ ಬೇಧ ಮಾಡುವ ಅತ್ತೆಯ ಮನಸ್ಸು ಗೆಲ್ಲುವಲ್ಲಿ ಹರಸಾಹಸ ಪಡುತ್ತಿದ್ದಾಳೆ. ಇಂತಹ ಸಾಮಾಜಿಕ ಕಳಕಳಿ ಹೊಂದಿರುವ ಸೀರಿಯಲ್ ಕನ್ನಡಿಗರ ಮನಸ್ಸು ಗೆದ್ದಿದೆ. ಯಶಸ್ವಿ 100 ಸಂಚಿಕೆಗಳನ್ನ ಪೊರೈಸಿರುವ ಕೃಷ್ಣ ಸುಂದರಿಗೆ ನಮ್ಮ ಕಡೆಯಿಂದ ಬೆಸ್ಟ್ ವಿಶ್ಶಸ್.
Laxmi News 24×7